ಕಾರ್ಕಳ ಎಎಸ್ಪಿಯಾಗಿ ಡಾ.ಹರ್ಷ ಪ್ರಿಯಂವದ ನೇಮಕ
Update: 2025-02-15 17:58 IST
ಕಾರ್ಕಳ, ಫೆ.15: ಕಾರ್ಕಳ ಪೊಲೀಸ್ ಉಪ ವಿಭಾಗಕ್ಕೆ ಸಹಾಯಕ ಪೊಲೀಸ್ ಅಧೀಕ್ಷಕರಾಗಿ ಐಪಿಎಸ್ ಅಧಿಕಾರಿ ಡಾ.ಹರ್ಷ ಪ್ರಿಯಂವದ ಅವರನ್ನು ನೇಮಕಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ.
ಹರ್ಷ ಪ್ರಿಯಂವದ ಎಂಬಿಬಿಎಸ್ ಪದವಿಧರೆಯಾಗಿದ್ದು, 2020ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ 165ನೇ ರ್ಯಾಂಕ್ ಪಡೆದಿದ್ದರು. ಪ್ರಸ್ತುತ ಕಾರ್ಕಳ ಡಿವೈಎಸ್‌ಪಿ ಅರವಿಂದ ಕಲಗುಜ್ಜಿ ಅವರನ್ನು ವರ್ಗಾವಣೆಗೊಳಿಸಲಾಗಿದೆ.