ಮೊಬೈಲ್ ವೀಕ್ಷಿಸುತ್ತಿದ್ದ ವ್ಯಕ್ತಿ ಕುಳಿತಲ್ಲಿಯೇ ಮೃತ್ಯು
Update: 2025-02-19 21:35 IST
ಸಾಂದರ್ಭಿಕ ಚಿತ್ರ
ಮಣಿಪಾಲ, ಫೆ.19: ಇಯರ್ ಫೋನ್ ಮೂಲಕ ಮೊಬೈಲ್ ನೋಡುತ್ತಿದ್ದ ವ್ಯಕ್ತಿಯೊಬ್ಬರು ಬೆಡ್ ಮೇಲೆ ಕುಳಿತಲ್ಲಿಯೇ ಮೃತಪಟ್ಟ ಘಟನೆ ಫೆ.18ರಂದು ಬೆಳಗ್ಗೆ ಪರ್ಕಳ ಗ್ಯಾಡ್ಸನ್ ಎಂಬಲ್ಲಿ ನಡೆದಿದೆ.
ಮೃತರನ್ನು ಸ್ಥಳೀಯ ನಿವಾಸಿ ಗುರುಪ್ರಸಾದ್(49) ಎಂದು ಗುರುತಿಸ ಲಾಗಿದೆ. ಇವರು ರಾತ್ರಿ ಊಟ ಮಾಡಿ ಮಲಗಲು ಕೋಣೆಗೆ ಹೋಗಿದ್ದರು. ಅಲ್ಲಿ ಬೆಡ್ ಮೇಲೆ ಕುಳಿತು ಕಿವಿಗೆ ಇಯರ್ ಫೋನ್ ಹಾಕಿ ಮೊಬೈಲ್ ನೋಡುತ್ತಿದ್ದರು. ಈ ವೇಳೆ ಅವರು ಹೃದಯ ಸ್ತಂಭನ ಅಥವಾ ಇತರ ಯಾವುದೋ ಕಾರಣಗಳಿಂದ ಮೃತಪಟ್ಟಿರಬಬಹುದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.