ಕಾರು ಶೋರೂಂನಲ್ಲಿ ಕಳವಿಗೆ ಯತ್ನ: ಪ್ರಕರಣ ದಾಖಲು
Update: 2025-02-19 21:36 IST
ಕುಂದಾಪುರ, ಫೆ.19: ಕಾರು ಶೋರೂಮ್‌ನಲ್ಲಿ ಕಳವಿಗೆ ಯತ್ನಿಸಿರುವ ಘಟನೆ ಫೆ.19ರಂದು ನಸುಕಿನ ವೇಳೆ ಬೀಜಾಡಿ ಎಂಬಲ್ಲಿ ನಡೆದಿದೆ.
ಇಶಾನ್ ಮತ್ತು ಯಾಹಿನ್ ಕುಂಭಾಶಿ ಎಂಬವರು ಕಬ್ಬಿಣದ ರಾಡ್ ಮತ್ತು ಸುತ್ತಿಗೆಯಿಂದ ಶೋರೂಮ್‌ನ ಬೀಗವನ್ನು ಒಡೆಯುತ್ತಿರುವುದು ಸಿಸಿಟಿವಿಯಲ್ಲಿ ಕಂಡುಬಂದಿದ್ದು, ಅದರಂತೆ ಮಾಲಕರು ಸ್ಥಳಕ್ಕೆ ಬಂದು ನೋಡಿದಾಗ ಶೋರೂಮ್‌ನ ಶಟರ್‌ಗೆ ಅಳವಡಿಸಿದ ಬೀಗವನ್ನು ಜಖಂಗೊಳಿಸಿ ಕಳ್ಳತನಕ್ಕೆ ಪ್ರಯತ್ನಿಸಿರುವುದು ಕಂಡುಬಂದಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.