ಹೃದಯಾಘಾತ: ಬೈಕ್‌ನಲ್ಲಿ ಆಸ್ಪತ್ರೆಗೆ ಬಂದು ಮೃತಪಟ್ಟ ವ್ಯಕ್ತಿ
Update: 2025-03-06 22:21 IST
ಹೆಬ್ರಿ, ಮಾ.6: ಅಂಗಡಿ ಬಂದ್ ಮಾಡಿದ ಬಳಿಕ ಎದೆ ನೋವು ಕಾಣಿಸಿಕೊಂಡಿದ್ದರಿಂದ ವ್ಯಕ್ತಿಯೊಬ್ಬರು ಮೋಟಾರ್ ಬೈಕ್‌ನಲ್ಲಿ ನೇರವಾಗಿ ಆಸ್ಪತ್ರೆಗೆ ಬಂದು ವೈದ್ಯರು ಪರೀಕ್ಷಿಸುವಾಗ ಮೃತಪಟ್ಟ ಘಟನೆ ಹೆಬ್ರಿಯ ಚಾರದಿಂದ ವರದಿಯಾಗಿದೆ.
ಚಾರ ಸರ್ಕಲ್ ಬಳಿ ಅಂಗಡಿ ನಡೆಸುವ ನಾರಾಯಣ (44) ಎಂಬವರು ರಾತ್ರಿ 8:30ಕ್ಕೆ ಮನೆಗೆ ತೆರಳಲು ಅಂಗಡಿ ಮುಚ್ಚುತಿದ್ದಂತೆ ಎದೆ ನೋವು ಕಾಣಿಸಿಕೊಂಡಿದ್ದು, ನೇರವಾಗಿ ಮೋಟಾರ್ ಸೈಕಲ್‌ನಲ್ಲಿ ಹೆಬ್ರಿಯ ಖಾಸಗಿ ಆಸ್ಪತ್ರೆಗೆ ಧಾವಿಸಿ ಬಂದಿದ್ದರು. ಅಲ್ಲಿ ಅವರನ್ನು ಪರೀಕ್ಷಿಸಿದ ವೈದ್ಯರು ಹೃದಯಾಘಾತದಿಂದ ನಾರಾಯಣ 8:35ಕ್ಕೆ ನಿಧನರಾದರು ಎಂದು ತಿಳಿಸಿದರು. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.