×
Ad

ಕಾರ್ಕಳ: ಮಿಯ್ಯಾರು ಲವ ಕುಶ ಜೋಡುಕೆರೆ ಕಂಬಳ

Update: 2025-03-15 22:09 IST

ಕಾರ್ಕಳ : ಕಂಬಳ ಕತುಳುನಾಡಿನ ಸಾಂಸ್ಕೃತಿಕ ಕಾರ್ಯಕ್ರಮವಾಗಿ ಪ್ರಸಿದ್ಧ ಪಡೆದಿದೆ. ಕೃಷಿಗೆ ವಿಳಂಬದ ಸಮಯದಲ್ಲಿ ಕಂಬಳದಂತಹ ಸಂಸ್ಕೃತಿಕ ಕಾರ್ಯಕ್ರಮಗಳು ನಮ್ಮ ದೇಶದಲ್ಲಿ ಒಂದಲ್ಲ ಒಂದು ಕಡೆಯಲ್ಲಿ ನಡೆಯುತ್ತದೆ. ಕರಾವಳಿಯಲ್ಲಿ ಕಂಬಳ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ. ಕಂಬಳದಲ್ಲಿ ಭಾಗವಹಿಸುವುದೇ ಒಂದು ಮರ್ಯಾದಿ ಪ್ರಶ್ನೆಯಾಗಿದೆ. ನಮ್ಮ ಭಾಗದಲ್ಲಿ ಹೋರಿಗಳನ್ನು ಓಡಿಸುತ್ತಾರೆ. ಸಾಂಸ್ಕೃತಿಕ ಮನೋರಂಜನೆಯೂ ಆಗಿದೆ. ಜಾತಿ ಮತ ಪಂಥ ಎಲ್ಲವನ್ನೂ ಮೀರಿ ನಡೆಯುವ ಈ ಕಂಬಳವನ್ನು ಪ್ರೋತ್ಸಾಹಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ದೇಶದಲ್ಲಿ ಸಾಂಸ್ಕೃತಿಕ ಪುನರುತ್ಥಾನದ ಜೊತೆಯಲ್ಲಿ ಧಾರ್ಮಿಕತೆ ಜಾಗ್ರತವಾಗಿ ಜಗತ್ತಿನಲ್ಲೇ ದೇಶ ಗುರುತಿಸುವಂತಾಗಿದೆ. ಅಚ್ಚುಕಟ್ಟಿನ ವ್ಯವಸ್ಥೆಯಲ್ಲಿ ದ.ಕ, ಉಡುಪಿ ಅಗ್ರ ಸ್ಥಾನದಲ್ಲಿದೆ. ಜಾಣ ಜನರು ಇಲ್ಲಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು.

ಅವರು ಮಿಯ್ಯಾಾರು ಕಂಬಳ ಸಮಿತಿ, ನವೋದಯ ಗ್ರಾಾಮ ವಿಕಾಸ ಚಾರಿಟೇಬಲ್ ಟ್ರಸ್ಟ್ ಮಂಗಳೂರು, ಆಶ್ರಯದಲ್ಲಿ ನಡೆದ 21ನೇ ವರ್ಷದ ಮಿಯ್ಯಾಾರು ಲವ- ಕುಶ ಜೋಡುಕರೆ ಕಂಬಳದಲ್ಲಿ ಭಾಗವಹಿಸಿ ಮಾತನಾಡಿದರು.

ಕಾರ್ಕಳ ಶಾಸಕ ಕಂಬಳ ಸಮಿತಿಯ ಅಧ್ಯಕ್ಷ ವಿ.ಸುನಿಲ್ ಕುಮಾರ್ ಮಾತನಾಡಿ, ಕಂಬಳಕ್ಕೆ ಹೊಸ ಮೆರುಗು ತಂದಿದೆ. ನಮ್ಮೂರಿನ ಕಂಬಳ ಪ್ರಸಿದ್ದಿ ಪಡೆದು ದೇಶದ ಜನತೆಯ ಗಮನ ಸೆಳೆಯುತ್ತಿದೆ. ತಯಳುನಾಡಿನ ಜನ ಬೆಳೆಸಿಕೊಂಡು ಬಂದಿದ್ದಾರೆ ಆದುನಿಕ ಸ್ಪರ್ಶವನ್ನು ನೀಡುವ ಮೂಲಕ. ಮನೆಯ ಮಗುವಿನಂತೆ ಕೋಣಗಳನ್ನು ಸಾಕಿ ಬೆಳೆಸಿಕೊಂಡು ಕಂಬಳವನ್ನು ಉಳಿಸುವ ಪ್ರಯತ್ನ ಅವಿಭಜಿತ ಜಿಲ್ಲೆಯ ಜನ ಮಾಡುತ್ತಿದ್ದಾರೆ. ಸರ್ಕಾರ ಅನುದಾನವನ್ನು ನೀಡುತ್ತ ಬಂದಿದೆ. ಪ್ರವಾಸೋದ್ಯಮ ದೃಷ್ಟಿಯಿಂದ ಕಂಬಳ ಆಕರ್ಷಣಿಯವಾಗಿದೆ. ಎಲ್ಲಾ ಆತಂಕವನ್ನು ಮೀರಿ ಕಂಬಳಕ್ಕೆ ಕೊಟ್ಟ ಪ್ರೋತ್ಸಾಹದಿಂದ ಕಂಬಳ ನಡೆಯುತ್ತ ಬಂದಿದೆ. ಹೆಚ್ಚಿನ ಅನುದಾನವನ್ನು ನೀಡುವಂತೆ ಅಧಿವೇಶನ ದಲ್ಲೂ ಮಾತುಗಳು ಬಂದಿದೆ. ಸರ್ಕಾರ ಅನುದಾನವನ್ನು ಕಾಯದೆ ದಾನಿಗಳ ಸಹಕಾರದಿಂದ ಕಂಬಳ ಪ್ರತೀ ವರ್ಷವೂ ನಡೆಯುತ್ತ ಬಂದಿದೆ. ಕಂಬಳವನ್ನು ಬೆಂಬಲಿಸುವ ಕೆಲಸ ನಾವೆಲ್ಲರೂ ಮಾಡೋಣ ಎಂದರು.

ಈ ಸಂದರ್ಭದಲ್ಲಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ಅಧ್ಯಕ್ಷ ಎಂ ಎನ್ ರಾಜೇಂದ್ರ ಕುಮಾರ್, ಶಾಸಕ ಗುರ್ಮೇ ಸುರೇಶ್ ಶೆಟ್ಟಿ, ಕುಂದಾಪುರ ಶಾಸಕ ಕಿರಣ್ ಕೊಡ್ಗಿ, ಪುಣೆ ಶಾಸಕ ಸುನೀಲ್ ಕಾಂಬ್ಳಿ, ಮುನಿಯಾಲು ಉದಯ ಕ್ರಷ್ಣಯ್ಯ ಶೆಟ್ಟಿ ಚಾರಿಟೇಬಲ್ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ, ಮುಂಬೈ ಉದ್ಯಮಿ ಗಿರೀಶ್ ಶೆಟ್ಟಿ ಕುಡುಪುಲಾಜೆ, ಕಂಬಳ ಸಮಿತಿ ಕಾರ್ಯಾದ್ಯಕ್ಷ ಜೀವನ್ದಾಸ್ ಅಡ್ಯಂತಾಯ, ಕಾರ್ಕಳ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಶುಭದ ರಾವ್, ಗ್ಯಾರಂಟಿ ಯೋಜನಾ ಅನುಷ್ಠಾನ ಸಮಿತಿ ಅಧ್ಯಕ್ಷ ಅಜಿತ್ ಹೆಗ್ಡೆ, ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್, ಮಾಜಿ ತಾ ಪಂ ಸದಸ್ಯ ಸುಧಾಕರ್ ಶೆಟ್ಟಿ, ಮಟ್ಟಾರ್ ರತ್ನಾಕರ ಹೆಗ್ಡೆ, ಕಾರ್ಕಳ ಪೋಲಿಸ್ ಉಪಾಧೀಕ್ಷಕರು ಹರ್ಷ ಪ್ರಿಯಂವದ, ಕಾರ್ಕಳ ಅಜಿತ್ ಹೆಗ್ಡೆ ,ತಹಶಿಲ್ದಾರ್ ಆರ್ ಪ್ರದೀಪ್, ಬಿಜೆಪಿ ಜಿಲ್ಲಾ ಉಪಾದ್ಯಕ್ಷ ಮಹಾವೀರ್ ಹೆಗ್ಡೆ, ಗೇರು ಅಭಿವ್ರದ್ದಿ ನಿಗಮ ಮಾಜಿ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಅಂತೋನಿ ಡಿಸೋಜ ನಕ್ರೆ, ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಆರ್ ಶೆಟ್ಟಿ, ಶ್ಯಾಮ್ ಎನ್ ಶೆಟ್ಟಿ ನಲ್ಲೂರು, ಉಡುಪಿ ಶಾಸಕ ಯಶಪಾಲ್ ಸುವರ್ಣ, ಕಾರ್ಕಳ ಪುರಸಭಾ ಅಧ್ಯಕ್ಷ ಯೋಗೀಶ್ ದೇವಾಡಿಗ, ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಉಪಸ್ಥಿತರಿದ್ದರು.



Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News