×
Ad

ಪರಸ್ಪರ ಹೊಡೆದಾಟ: ಇಬ್ಬರ ಬಂಧನ

Update: 2025-03-25 21:49 IST

ಉಡುಪಿ, ಮಾ.25: ನಗರದ ಕೋರ್ಟ್ ರಸ್ತೆಯ ತುಳುನಾಡು ಟವರ್ಸ್ ಎಕ್ಸಿಸ್ ಬ್ಯಾಂಕ್‌ನ ಎಟಿಎಂ ಎದುರು ಸಾರ್ವಜನಿಕ ಸ್ಥಳದಲ್ಲಿ ಮಾ.24ರಂದು ಮಧ್ಯಾಹ್ನ ವೇಳೆ ಪರಸ್ಪರ ಹೊಡೆದಾಡಿಕೊಂಡು ಭಯ ಹಾಗೂ ಪ್ರಕ್ಷುಬ್ದ ವಾತಾವರಣ ಉಂಟು ಮಾಡಿದ ಆರೋಪದಲ್ಲಿ ಇಬ್ಬರನ್ನು ಉಡುಪಿ ನಗರ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳಾದ ಬಾಲಾಜಿ ಹಾಗೂ ಆಶ್ರಫ್ ಸಾಹೇಬ್ ಎಂಬವರು ಅವಾಚ್ಯ ಶಬ್ದಗಳಿಂದ ಬೈದಾಡುತ್ತಾ ಪರಸ್ಪರ ದೂಡಾಡಿಕೊಂಡು ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ವರ್ತಿಸುತಿದ್ದರು. ಅಲ್ಲದೆ ಇವರು ಕೈ-ಕೈ ಮಿಲಾಯಿಸಿ ಸಾರ್ವಜನಿಕ ಸ್ಥಳದಲ್ಲಿ ಭಯದ ಮತ್ತು ಪ್ರಕ್ಷುಬ್ದ ವಾತಾವರಣ ಉಂಟು ಮಾಡಿ ರುವುದಾಗಿ ದೂರಲಾಗಿದೆ. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News