ಸೋಮವಾರ ಈದುಲ್ ಫಿತ್ರ್: ಖಾಝಿ ಮಾಣಿ ಉಸ್ತಾದ್ ಘೋಷಣೆ
Update: 2025-03-30 19:27 IST
ಮಾಣಿ ಉಸ್ತಾದ್
ಉಡುಪಿ: ಇಂದು ಶವ್ವಾಲ್ ತಿಂಗಳ ಚಂದ್ರದರ್ಶನವಾಗಿರುವುದರಿಂದ ಸೋಮವಾರ ಈದುಲ್ ಫಿತ್ರ್ ಆಚರಿಸಲಾಗುವುದು ಎಂದು ಉಡುಪಿ , ಚಿಕ್ಕಮಗಳೂರು, ಹಾಸನ, ಶಿವಮೊಗ್ಗ ಜಿಲ್ಲಾ ಸಂಯುಕ್ತ ಜಮಾಅತ್ ಹಾಗೂ ದ.ಕ.ಜಿಲ್ಲೆಯ ವಿವಿಧ ಮೊಹಲ್ಲಾಗಳ ಖಾಝಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಘೋಷಿಸಿದ್ದಾರೆ.
ಈದ್ ದಿನ ಎಲ್ಲಾ ಮಸೀದಿ ಈದ್ಗಾಗಳಲ್ಲಿ ಫೆಲೆಸ್ತೀನ್ ಜನತೆಗಾಗಿ ಪ್ರಾರ್ಥಿಸುವಂತೆಯೂ ಎಲ್ಲಾ ಮೊಹಲ್ಲಾಗಳಲ್ಲಿ ಮೊಹಲ್ಲಾ ಕಮಿಟಿಗಳು, ಸ್ಥಳೀಯ ಯುವ ಸಂಘಸಂಸ್ಥೆಗಳು ಮಾದಕ ವ್ಯಸನಗಳ ವಿರುದ್ಧ ಜಾಗೃತಿ ಮೂಡಿಸುವಂತೆಯೂ ಅವರು ಪ್ರಕಟನೆಯಲ್ಲಿ ಕರೆ ನೀಡಿದ್ದಾರೆ ಎಂದು ಉಡುಪಿ ಜಿಲ್ಲಾ ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಜಿ ಎಂ ಎ ಬಾವು ಮೂಳೂರು ತಿಳಿಸಿದ್ದಾರೆ