×
Ad

ಕಾರ್ಕಳ ಪುರಸಭೆಯ ಮಾರುಕಟ್ಟೆ ಪ್ರಕ್ರಿಯೆ ಬಗ್ಗೆ ಹೈಕೋರ್ಟ್ ಆದೇಶ

Update: 2025-04-25 22:30 IST

ಕಾರ್ಕಳ: ಮಾನ್ಯ ಉಚ್ಛ ನ್ಯಾಯಾಲಯವು ಸುರೇಂದ್ರ ಮತ್ತು ಇತರರು ಸಲ್ಲಿಸಿರುವ ರಿಟ್ ಅರ್ಜಿಯಲ್ಲಿ ಮಧ್ಯಂತರ ಆದೇಶವನ್ನು ಹೊರಡಿಸಿದ್ದು ಪ್ರಸಕ್ತ ಅಂಗಡಿಯ ಬಾಡಿಗೆದಾರರನ್ನು ಮುಂದಿನ ಆದೇಶದವರೆಗೆ ಒಕ್ಕಲೆಬ್ಬಿಸಬಾರದೆಂದು ಮಧ್ಯಂತರ ಆದೇಶ ಮಾಡಿರುತ್ತದೆ.

ಕಾರ್ಕಳ ಪುರಸಭೆ ಮಾರುಕಟ್ಟೆ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸುವರು, ಪ್ರಸಕ್ತ ಬಾಡಿಗೆದಾರರು ಅಂಗಡಿ ಕಟ್ಟೋಣಗಳನ್ನು ಪುರಸಭೆಗೆ ಒಪ್ಪಿಸದೆ ಇದ್ದಲ್ಲಿ ಮತ್ತು ಕಾನೂನು ಪ್ರಕ್ರಿಯೆ ಕೈಗೊಂಡು ಒಕ್ಕಲು ಎಬ್ಬಿಸಿದ ನಂತರವೇ ಏಲಂ ಪ್ರಕ್ರಿಯೆಯಲ್ಲಿ ಭಾಗವಹಿಸಬೇಕೆ ? ಎಂದು ಬಿಡ್ಡುದಾರರು ಗೊಂದಲಕ್ಕೆ ಒಳಗಾಗಿದ್ದಾರೆ. ಅಂಗಡಿಯ ಏಲಂ ಅವಕಾಶ ಇದ್ದರೂ ಸಹಾ, ಸ್ವಾಧೀನತೆಯ ಪ್ರಕರಣ ಮುಗಿಯದೆ ವರ್ಷಾನುಗಟ್ಟಲೆ ಸ್ವಾಧೀನ ಬಾರದೆ ಇದ್ದಲ್ಲಿ ಪುರಸಭೆಗೆ ನೀಡಿದಂತಹ ಠೇವಣಿ ಬಡ್ಡಿ ರಹಿತವಾಗಿ ಅಲ್ಲಿ ಇರುತ್ತದೆ. ಆದ್ದರಿಂದ ಬಿಡ್ಡುದಾರರು ನಷ್ಟಕ್ಕೆ ಒಳಗಾಗಲಿದ್ದಾರೆ. ಇಂಥ ಸ್ಥಿತಿಯಲ್ಲಿ ಪ್ರಸಕ್ತ ಬಾಡಿಗೆದಾರರಿಗೆ ಉಚ್ಛ ನ್ಯಾಯಾಲಯದ ಆದೇಶವು ನಿಟ್ಟುಸಿರು ಬಿಡುವಂತೆ ಮಾಡಿರುತ್ತದೆ.

ಈ ಎಲ್ಲಾ ಏಲಂ ಪ್ರಕ್ರಿಯೆಗಳು "ಹೈಕೋರ್ಟ್ ನ ಅಂತಿಮ ಆದೇಶಕ್ಕೆ ಒಳಪಟ್ಟು" ನಡೆಸಬೇಕೆಂದು ತನ್ನ ಆದೇಶದಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News