×
Ad

ಕೇರಳ ಸಮಾಜಂ ಉಡುಪಿ ಉದ್ಘಾಟನೆ, ಲೋಗೋ ಅನಾವರಣ

Update: 2025-05-18 20:51 IST

ಉಡುಪಿ, ಮೇ 18: ಕೇರಳ ಸಮಾಜಂ ಉಡುಪಿಯ ಉದ್ಘಾಟನೆ ಹಾಗೂ ಲೋಗೋ ಅನಾವರಣ ಕಾರ್ಯಕ್ರಮ ಉಡುಪಿ ಯಕ್ಷಗಾನ ಕಲಾರಂಗದ ಐವೈಸಿ ಸಭಾಂಗಣದಲ್ಲಿ ರವಿವಾರ ಜರಗಿತು.

ಉಡುಪಿ ಶಾಸಕ ಯಶ್‌ಪಾಲ್ ಎ.ಸುವರ್ಣ, ಕೇರಳ ಸಮಾಜಂ ಅಧ್ಯಕ್ಷ ಅರುಣ್ ಕುಮಾರ್, ಮಣಿಪಾಲ ಕೆಎಂಸಿ ಕಾರ್ಡಿಯಾಲಜಿ ವಿಭಾಗದ ಪ್ರೊಫೆಸರ್ ಹಾಗೂ ಯುನಿಟ್ ಹೆಡ್ ಡಾ.ಟಾಪ್ ದೇವಸ್ಯ, ಸುವರ್ಣ ಕರ್ನಾಟಕ ಕೇರಳ ಸಮಾಜಂನ ರಾಜ್ಯಾಧ್ಯಕ್ಷ ರಾಜನ್ ಜಾಕೋಬ್, ಶಿವಮೊಗ್ಗದ ಮಲೆಯಾಳಿ ಸಮಾಜಂ ಅಧ್ಯಕ್ಷ ಸತೀಶ್ ಎನ್.ಡಿ., ಮಂಗಳೂರಿನ ಕರ್ನಾಟಕ ನಾಯರ್ ಸರ್ವಿಸ್ ಸೊಸೈಟಿ ಅಧ್ಯಕ್ಷ ಮುರಳಿ ಹೊಸಮಜಲು, ಮಂಗಳೂರಿನ ವಿಶ್ವಕರ್ಮ ಮಲೆಯಾಳಿ ಸಮಾಜದ ಅಧ್ಯಕ್ಷ ಸಂದೇಶ್ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಸಾಧಕರಾದ ಥೋಮಸ್ ಲೋಸಿಯೋಸ್, ಬಿನೀ ಜಾರ್ಜ್, ಪಿ.ಎ.ಮೋಹನ್‌ದಾಸ್, ಕೃಷ್ಣನ್ ಎಂ., ಕೆ.ಕೆ.ಎಂ.ನಂಬಿಯಾರ್ ಅವರನ್ನು ಸಮ್ಮಾನಿಸಲಾಯಿತು.

ಸಮಾಜದ ಕಾರ್ಯನಿರ್ವಹಕ ಸದಸ್ಯ ನವೀನ್ ಸ್ವಾಗತಿಸಿದರು. ಕಾರ್ಯದರ್ಶಿ ಪ್ರಶಾಂತ್ ಕುಮಾರ್ ವಂದಿಸಿದರು. ಸದಸ್ಯೆ ಇಂದಿರಾ ಸಂತೋಷ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News