ಮಲ್ಪೆ ದಕ್ಕೆಯಲ್ಲಿ ಅಪರಿಚಿತ ಮೃತದೇಹ ಪತ್ತೆ
Update: 2025-05-18 21:00 IST
ಮಲ್ಪೆ, ಮೇ 18: ಮಲ್ಪೆ ಕರಾವಳಿ ಕಾಲವು ಪೊಲೀಸ್ ಕಛೇರಿ ಎದುರು ಮಲ್ಪೆ ಬಂದರಿನ ನೀರಿನಲ್ಲಿ ಸುಮಾರು 40 ರಿಂದ 42 ವರ್ಷ ಪ್ರಾಯದ ಅಪರಿಚಿತ ಗಂಡಸಿನ ಮೃತದೇಹ ಮೇ 17ರಂದು ಪತ್ತೆಯಾಗಿದೆ.
ಮೃತರು ಗುಲಾಬಿ ಬಣ್ಣದ ಟೀ ಶರ್ಟ್ ಮತ್ತು ಕಪ್ಪುಬಣ್ಣದ ಬರ್ಮೊಡ ಧರಿಸಿದ್ದು, ಮೃತರ ಕಿಸೆಯಲ್ಲಿ ಸಿಕ್ಕಿದ ಆಧಾರ ಕಾರ್ಡನಲ್ಲಿ ಒಡಿಸ್ಸಾ ಮೂಲದ ಧರತ್ ಮಲ್ಲಿಕ್ ಎಂಬುದಾಗಿ ನಮೂದಿಸಲಾಗಿತ್ತು. ಇವರು ಮೇ 16ರಂದು ರಾತ್ರಿ ವೇಳೆ ಬೋಟಿಗೆ ಹತ್ತುವ ಅಥವಾ ಇಳಿಯುವಾಗ ನೀರಿನಲ್ಲಿ ಬಿದ್ದು ಮೃತ ಪಟ್ಟಿರಬಹು ದೆಂದು ಶಂಕಿಸಲಾಗಿದೆ. ಈ ಬಗ್ಗೆ ಮಲ್ಪೆಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.