×
Ad

ಸಾಮಗಾನ ಆಧ್ಯಾತ್ಮ ಮತ್ತು ಕಲಾ ಕೇಂದ್ರ ಲೋಕಾರ್ಪಣೆ

Update: 2025-06-04 18:30 IST

ಉಡುಪಿ, ಜೂ.4: ಸ್ವಾತಂತ್ರ ಹೋರಾಟಗಾರ, ಹರಿಕಥಾ ವಿದ್ವಾಂಸ, ತಾಳಮದ್ದಲೆ ಮತ್ತು ಯಕ್ಷಗಾನ ಕಲಾವಿದಾರಾಗಿದ್ದ ಕೀರ್ತಿ ಶೇಷ ಕಮಲಾಕ್ಷಿ ಮತ್ತು ಶಂಕರನಾರಾಯಣ ಸಾಮಗ(ದೊಡ್ಡ ಸಾಮಗ) ಸಂಸ್ಮರಣೆಯ ಅಂಗವಾಗಿ ಸ್ಥಾಪಿಸಲಾದ ಸಾಮಗಾನ ಆಧ್ಯಾತ್ಮ ಮತ್ತು ಕಲಾ ಕೇಂದ್ರವನ್ನು ಪೇಜಾವರ ಶ್ರೀವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಕೊಡವೂರಿನ ಲಕ್ಷ್ಮೀನಗರದಲ್ಲಿ ಇತ್ತೀಚೆಗೆ ಉದ್ಘಾಟಿಸಿದರು.

ಕೆಎಂಸಿಯ ನಿವೃತ್ತ ಯೋಗ ಪ್ರೊ.ಗಣಪತಿ ಜೋಶಿ ಆದಿ ಶಂಕರರ ಕುರಿತು ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಮುರಳಿ ಉಪಾಧ್ಯಾಯ, ಅಲ್ವಿನ್ ದಾಂತಿ, ವಿಜಯ ಕೊಡವೂರು, ವಾರಿಜ ರಾವ್ ಮಾತನಾಡಿದರು.

ಅಧ್ಯಕ್ಷತೆಯನ್ನು ಲಕ್ಷ್ಮೀನಾರಾಯಣ ಸಾಮಗ ವಹಿಸಿದ್ದರು. ಈ ಸಂದರ್ಭದಲ್ಲಿ ದೊಡ್ಡ ಸಾಮಗರ ಒಡನಾಟ ದವರಿಗೆ, ಹಿರಿಯರಿಗೆ ಹಾಗೂ ಯಕ್ಷಗಾನದಲ್ಲಿ ಸೇವೆ ಸಲ್ಲಿಸಿದವರಿಗೆ ಸನ್ಮಾನಿಸಲಾಯಿತು. ಅನುಪಮಾ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ವಂದಿಸಿದರು. ಬಳಿಕ ವಿಶ್ವಕರ್ಮ ಕುಣಿತ ಭಜನಾ ಮಂಡಳಿ ಮಧ್ವನಗರ ಇವರಿಂದ ಭಜನೆ ಸೇವೆ ನೆರವೇರಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News