×
Ad

ಅಂಗಾಂಗ ದಾನ ಮಾನವೀಯ ಕಾರ್ಯ: ಜಯಕರ ಶೆಟ್ಟಿ

Update: 2025-06-15 17:20 IST

ಉಡುಪಿ: ನಾವು ಹುಟ್ಟಿದಾಗ ಪಡೆದು ಬರುವುದು ನಮ್ಮ ದೇಹ. ದೇಹವೆಂದರೆ ವಿವಿಧ ಅಂಗಾಂಗಗಳು. ಇದರಿಂದ ನಿಜವಾದ ದಾನವೆಂದರೆ ಅಂಗಾಂಗ ದಾನವಾಗಿದೆ. ಅದು ಅತ್ಯಂತ ಮಾನವಿಯ ಕಾರ್ಯವೂ ಆಗಿದೆ ಎಂದು ಕುಂದಾಪುರ ರೆಡ್ ಕ್ರಾಸ್ ಸಭಾಪತಿ ಜಯಕರ ಶೆಟ್ಟಿ ಎಸ್ ಹೇಳಿದರು

ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಉಡುಪಿ ಜಿಲ್ಲಾ ಶಾಖೆ, ರಕ್ತನಿಧಿ ಕೇಂದ್ರ ಕುಂದಾಪುರ, ಡಿಸ್ಟ್ರಿಕ್ಟ್ ಕೆಮಿಸ್ಟ್ ಡ್ರಗ್ಗಿಸ್ಟ್ ಅಸೋಸಿಯೇಶನ್ ಉಡುಪಿ ಹಾಗೂ ನೇತ್ರ ಜ್ಯೋತಿ ಚಾರಿಟೇಬಲ್ ಟ್ರಸ್ಟ್ ಹಾಗೂ ಪ್ರಸಾದ್ ನೇತ್ರಾಲಯ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆಗಳ ಸಂಯುಕ್ತ ಆಶ್ರಯದಲ್ಲಿ ಬ್ರಹ್ಮಗಿರಿ ರೆಡ್ ಕ್ರಾಸ್ ಭವನ ದಲ್ಲಿ ನಡೆದ ರಕ್ತದಾನ ಮತ್ತು ನೇತ್ರ ತಪಾಸಣಾ ಶಿಬಿರ ಮತ್ತು ರಕ್ತದಾನಿಗಳಿಗೆ ಸನ್ಮಾನ ಕಾರ್ಯಕ್ರಮ ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆಯನ್ನು ವಹಿಸಿದ್ದ ಜಿಲ್ಲಾ ರೆಡ್‌ಕ್ರಾಸ್ ಸಭಾಪತಿ ಡಾ.ಅಶೋಕ್ ಕುಮಾರ್ ವೈ.ಜಿ. ರಕ್ತದಾನ ಮತ್ತು ನೇತ್ರದಾನದ ಮಹತ್ವವನ್ನು ವಿವರಿಸಿದರು. ಉಡುಪಿ ಜಿಲ್ಲಾ ಕೆಮಿಸ್ಟ್ ಡ್ರಗ್ಗಿಸ್ಟ್ ಅಸೋಸಿಯೇ ಶನ್‌ನ ಅಧ್ಯಕ್ಷ ಅಮ್ಮುಂಜೆ ರಮೇಶ್ ನಾಯಕ್, ಕಾರ್ಯದರ್ಶಿ ಸುಬ್ರಹ್ಮಣ್ಯ ರಾವ್, ರೆಡ್ ಕ್ರಾಸ್ ಆಡಳಿತ ಮಂಡಳಯ ಸದಸ್ಯರಾದ ವಿ.ಜಿ.ಶೆಟ್ಟಿ ಚಂದ್ರಶೇಖರ್ ಪ್ರಸಾದ್ ನೇತ್ರಾಲಯದ ವೈದ್ಯಾಧಿಕಾರಿ ಡಾ.ಮೋಹನ್ ಗೌಡ, ಕುಂದಾಪುರ ರೆಡ್ ಕ್ರಾಸ್ ಖಜಾಂಚಿ ಶಿವರಾಮ ಶೆಟ್ಟಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಅತೀ ಹೆಚ್ಚು ರಕ್ತದಾನ ಮಾಡಿದ ಉಮೇಶ್ ಪ್ರಭು, ಮಾರ್ಕ್ ವಿಜಯ್ ಡಿಸೋಜ. ಸುಧಾಕರ ನಾಯಕ್ ಎ. ಮತ್ತು ರಮೇಶ್ ಎಸ್.ತಿಂಗಳಾಯ ಅವರನ್ನು ಸನ್ಮಾನಿಸಲಾಯಿತು. ರೆಡ್‌ಕ್ರಾಸ್ ಕಾರ್ಯದರ್ಶಿ ಡಾ.ಗಣನಾಥ ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿದರು. ರೆಡ್‌ಕ್ರಾಸ್ ಸದಸ್ಯ ರಾಘವೇಂದ್ರ ಪ್ರಭು ಕರ್ವಾಲ್ ಸ್ವಾಗತಿಸಿದರು. ಖಜಾಂಚಿ ರಮಾದೇವಿ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News