ಶಿಕ್ಷೆಯಿಂದ ಶಿಕ್ಷಣ ಸಾಧ್ಯವಿಲ್ಲ; ಪ್ರೀತಿಯಿಂದ ತಿದ್ದಿ: ಡಾ.ಪಿ.ವಿ.ಭಂಡಾರಿ
ಉಡುಪಿ, ಜು.10: ಹೊಸ ಶತಮಾನ ಮಕ್ಕಳು ಹುಟ್ಟು ಚುರುಕು ಸ್ವಭಾವದವರು.ಪ್ರತಿಭಾವಂತರು ಮತ್ತು ಸೂಕ್ಷ್ಮ ಮನಸ್ಸಿನವರು. ಇವರಿಗೆ ಶಿಕ್ಷೆ ನೀಡಿ ವಿದ್ಯೆ ಕಲಿಸಲಾಗದು. ಅದು ಅವರ ಸೂಪ್ತ ಮನಸ್ಸಿನ ಮೇಲೆ ಆಗಾಧ ಪರಿಣಮ ಬೀರುತ್ತದೆ. ಕಲಿಕೆ ಇನ್ನು ಕುಂಟಿತವಾಗುತ್ತದೆ. ಆದ್ದರಿಂದ ಪ್ರೀತಿಯಿಂದ ತಿದ್ದಿರಿ, ಗದರಿಸಿಯಲ್ಲ ಎಂದು ನಾಡಿನ ಖ್ಯಾತ ಮನೋವೈದ್ಯ ಡಾ.ಪಿ.ವಿ.ಭಂಡಾರಿ ಹೆತ್ತವರಿಗೆ ತಿಳಿ ಹೇಳಿದ್ದಾರೆ.
ಸಂತೆಕಟ್ಟೆಯ ಮೌಂಟ್ ರೋಸರಿ ಆಂಗ್ಲಮಾಧ್ಯಮ ಶಾಲೆಯ ಪ್ರೌಢ ಶಾಲಾ ವಿಭಾಗದ ಶಿಕ್ಷಕ-ರಕ್ಷಕ ಸಭೆಯಲ್ಲಿ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಅವರು ಉಪನ್ಯಾಸ ನೀಡಿದರು. ಈಗಿನ ಮಕ್ಕಳ ಹೆತ್ತವರು, ಶಿಕ್ಷಕರು ಅಥವಾ ನಾಗರಿಕರು ತಮ್ಮ ಬಾಲ್ಯದಲ್ಲಿ ಕಲಿಕೆಗೋಸ್ಕರ ಮಾಡಿದ ಕೀಟಲೆಗಳಿಗೆ ಹೆತ್ತವರಿಂದ, ಶಿಕ್ಷಕರಿಂದ ಶಿಕ್ಷೆ ಪಡದವರಾದ್ದರಿಂದ ಶಿಕ್ಷೆಯ ಮೂಲಕ ಕಲಿಕೆ ಸಾದ್ಯ ಎಂದು ತಿಳಿದಿದ್ದಾರೆ. ಅಂದಿನ ಸಾಮಾಜಿಕ ಪದ್ದತಿ ಹಾಗಿತ್ತು ಎಂದವರು ಹೇಳಿದರು.
ಸಂಘದ ಕಾರ್ಯದರ್ಶಿ ಶಿಕ್ಷಕಿ ವನಿತಾ ಫೆರ್ನಾಂಡೀಸ್ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ಮುಖ್ಯ ಶಿಕ್ಷಕಿ ಸಿ. ಆನ್ಸಿಲ್ಲಾ ಶಾಲೆಯಲ್ಲಿ ಮಾಡಲಾಗಿರುವ ಮಾರ್ಪಾಡುಗಳ ಸ್ಥೂಲ ಪರಿಚಯ ನೀಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಶಾಲಾ ಸಂಚಾಲಕ ವಂ.ಡಾ. ರಾಕ್ ಡಿಸೋಜ ಮಾತನಾಡಿ ಪ್ರೌಢ ಶಾಲಾ ಹಂತದ ವಿದ್ಯಾರ್ಥಿಗಳು ಮಾಧ್ಯಮ ಮತ್ತು ಸ್ನೇಹಿತರ ಪ್ರಚೋದನೆಯಿಂದ ಮಾದಕ ವಸ್ತುಗಳಿಗೆ ಆಕರ್ಷಿತರಾಗುತ್ತಿರು ವುದು ಖೇದಕರ. ಮಕ್ಕಳ ಮೇಲೆ ಹೆಚ್ಚಿನ ನಿಗಾ ಇರಿಸಬೇಕು ಎಂದು ಹೆತ್ತವರಿಗೆ ಮನವಿ ಮಾಡಿದರು.
ಕಳೆದ ಸಾಲಿನ ಶಿಕ್ಷಕ-ರಕ್ಷಕ ಸಭೆಯ ಅಧ್ಯಕ್ಷರಾದ ನಾಗರಾಜ್ ಇವರನ್ನು ಸನ್ಮಾನಿಸಲಾಯಿತು. ಶಿಕ್ಷಕಿ ಮಮತಾ ಸ್ವಾಗತಿಸಿದರು. ಸತ್ಯವತಿ ವಂದಿಸಿ, ದಿವ್ಯಾಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.