ಅಂದರ್ ಬಾಹರ್ ಜುಗಾರಿ: ಏಳು ಮಂದಿ ಬಂಧನ
Update: 2025-07-14 22:32 IST
ಕೋಟ, ಜು.14: ಬಿಲ್ಲಾಡಿ ಗ್ರಾಮದ ಮೆತ್ತಗೊಳಿ ಎಂಬಲ್ಲಿ ಅಂದರ್ ಬಾಹರ್ ಜುಗಾರಿ ಆಡುತ್ತಿದ್ದ ಏಳು ಮಂದಿ ಆರೋಪಿಗಳನ್ನು ಕೋಟ ಪೊಲೀಸರು ಜು.13ರಂದು ಬಂಧಿಸಿದ್ದಾರೆ.
ಬಂಧಿತರನ್ನು ಹೆಗ್ಗುಂಜೆ ಗ್ರಾಮದ ಪಡುಬಾರಾಳಿಯ ಜಯಕರ ಪೂಜಾರಿ(42), ಆವರ್ಸೆ ಗ್ರಾಮದ ಚಕ್ರಪಾಣಿ (60), ಬಿಲ್ಲಾಡಿ ಗ್ರಾಮದ ಜಾನುವಾರುಕಟ್ಟೆಯ ನಿಲೇಶ್ ಕೋಠಾರಿ(43), ಹೊಸಾಳದ ಜಗದೀಶ ಆಚಾರ್ಯ(45), ನಡೂರು ಗ್ರಾಮದ ಗೋಪಾಲ ಎಂ.(70), ಶಿರೂರು ಗ್ರಾಮ ಮುದ್ದುಮನೆಯ ಸದಾಶಿವ ಶಾಸ್ತ್ರಿ(59), ಯಡ್ತಾಡಿ ಗ್ರಾಮದ ಕೇಸಾಪುರದ ಕಾಳಪ್ಪನಾಯ್ಕ(59) ಎಂದು ಗುರುತಿಸಲಾಗಿದೆ.
ಇವರಿಂದ ಒಟ್ಟು 9,880ರೂ. ನಗದು, ಎಂಟು ಮೊಬೈಲ್ ಫೋನ್, ಒಂದು ಕಾರು, ಮೂರು ಸ್ಕೂಟರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.