×
Ad

ಹರೀಶ್ ಸಿ.ಕೆ.ಗೆ ಪಿ.ಎಚ್.ಡಿ. ಪ್ರದಾನ

Update: 2025-08-01 19:41 IST

ಉಡುಪಿ, ಆ.1: ಬಾರಕೂರು ಶ್ರೀಮತಿ ರುಕ್ಮಿಣಿ ಶೆಡ್ತಿ ಮೆಮೋರಿಯಲ್ ನ್ಯಾಷನಲ್ ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತರ ಅಧ್ಯಯನ ಕೇಂದ್ರದ ಸಹ ಪ್ರಾಧ್ಯಾಪಕ ಶ್ರೇಣಿಯ ಗ್ರಂಥಪಾಲಕ ಹರೀಶ್ ಸಿ. ಕೆ. ಸಲ್ಲಿಸಿದ ‘ಎಸ್ಸೆಸ್‌ಮೆಂಟ್ ಆಫ್ ಇನ್‌ಫರ್ಮೇಶನ್ ಲಿಟರೆಸಿ ಸ್ಕಿಲ್ಸ್ ಆ್ಯಂಡ್ ಕಾಮ್ಪೆಟೆನ್ಸಿ ಅಮಂಗ್ ದ ಫ್ಯಾಕಲ್ಟಿ ಮೆಂಬರ್ಸ್‌ ಆಫ್ ಫಸ್ಟ್ ಗ್ರೇಡ್ ಕಾಲೇಜಸ್ ಇನ್ ಕರ್ನಾಟಕ: ಎ ಸ್ಟಡಿ’ ಎಂಬ ಸಂಶೋಧನಾ ಪ್ರಬಂಧಕ್ಕೆ ಆಂಧ್ರಪ್ರದೇಶದ ಕುಪ್ಪಂನ ದ್ರಾವಿಡಿಯನ್ ವಿಶ್ವವಿದ್ಯಾನಿಲಯವು ಡಾಕ್ಟರೇಟ್ ಪದವಿಯನ್ನು ಪ್ರದಾನ ಮಾಡಿದೆ.

ಇವರು ಬೆಂಗಳೂರಿನ ಚಿರ್ಡ್ ಬಿಜಿನೆಸ್ ಸ್ಕೂಲ್ ಸಂಸ್ಥೆಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎಸ್.ಚಂದ್ರಪ್ಪ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧ ಮಂಡಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News