×
Ad

ಉಡುಪಿ: ನಾಮಫಲಕಗಳಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯ

Update: 2025-08-02 20:12 IST

ಉಡುಪಿ ನಗರಸಭೆ

ಉಡುಪಿ, ಆ.2: ಉಡುಪಿ ನಗರಸಭಾ ವ್ಯಾಪ್ತಿಯಲ್ಲಿನ ಎಲ್ಲಾ ಕಛೇರಿ, ಹೊಟೇಲ್, ಬ್ಯಾಂಕ್, ಕಂಪೆನಿಗಳು ಹಾಗೂ ಅಂಗಡಿಗಳ ನಾಮಫಲಕಗಳು ಶೇ.60ರಷ್ಟು ಕನ್ನಡ ಭಾಷೆಯಲ್ಲಿರುವಂತೆ ಹಾಗೂ ನಾಮಫಲಕದ ಜೊತೆಗೆ ಆ ಸ್ಥಳದ ಐತಿಹ್ಯ ಹಾಗೂ ಸಾಂಸ್ಕೃತಿಕ ಹಿನ್ನೆಲೆಯಲ್ಲಿ ಊರಿನ ಹೆಸರನ್ನು ಸಹ ನಮೂದಿಸುವುದು ಕಡ್ಡಾಯವಾಗಿದ್ದು, ಉಡುಪಿ ನಗರಸಭಾ ವ್ಯಾಪ್ತಿಯ ಎಲ್ಲಾ ಉದ್ದಿಮೆದಾರರು 15 ದಿನಗಳ ಒಳಗೆ ತಮ್ಮ ಉದ್ದಿಮೆಯ ನಾಮಫಲಕದಲ್ಲಿ ಊರಿನ ಹೆಸರಿನೊಂದಿಗೆ ಕನ್ನಡದಲ್ಲಿ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಲು ಮತ್ತು ಇತರೆ ಭಾಷೆಯ ನಾಮಫಲಕಕ್ಕಿಂತ ಕನ್ನಡದ ನಾಮಫಲಕವನ್ನು ಶೇ.60 ರಷ್ಟು ದೊಡ್ಡದಾಗಿ ಪ್ರದರ್ಶಿಸಲು ಕ್ರಮವಹಿಸಬೇಕು.

ಈವರೆಗೂ ಉದ್ದಿಮೆ ಪರವಾನಿಗೆಯನ್ನು ಪಡೆದುಕೊಳ್ಳದ/ ನವೀಕರಿಸದೇ ಇರುವ ಉದ್ದಿಮೆದಾರರು 7 ದಿನಗಳ ಒಳಗೆ ಉದ್ದಿಮೆ ಪರವಾನಿಗೆ ಪಡೆಯಲು ನಿಯಮಾನುಸಾರ ಅರ್ಜಿ ಸಲ್ಲಿಸಬಹುದು. ತಪ್ಪಿದ್ದಲ್ಲಿ ಕರ್ನಾಟಕ ಪುರಸಭಾ ಅಧಿನಿಯಮ 256ರ ಉಪ ನಿಯಮ (6) ರಂತೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ನಗರಸಭೆ ಪೌರಾಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News