×
Ad

ನ.17ರಂದು ’ಬೆಂಬಿಡದ ನಾವಿಕ’ ಕನ್ನಡ ಸಿನಿಮಾ ಬಿಡುಗಡೆ

Update: 2023-11-11 21:08 IST

ಉಡುಪಿ, ನ.11: ಅಂಬಲಪಾಡಿ ಮಹಾಕಾಳಿ ಕಂಬೈನ್ಸ್‌ನಡಿ ನಿರ್ಮಿಸಿರುವ ಮಹೇಶ್ ಜಿ. ನಿರ್ಮಾಣದ ’ಬೆಂಬಿಡದ ನಾವಿಕ’ ಕನ್ನಡ ಸಿನಿಮಾ ನ.17ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರದ ನಾಯಕ ನಟ, ನಿರ್ದೇಶಕ ಶ್ರೀಯಾನ್ ತಿಳಿಸಿದ್ದಾರೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಡುಪಿ ಸಹಿತ ರಾಜ್ಯಾದ್ಯಂತ 30ಕ್ಕೂ ಅಧಿಕ ಚಿತ್ರ ಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಚಿತ್ರದ ಶೇ.95ರಷ್ಟು ಭಾಗವನ್ನು ಉಡುಪಿ ಜಿಲ್ಲೆಯಲ್ಲೇ ಚಿತ್ರೀಕರಣ ಮಾಡಲಾಗಿದೆ. ಉಡುಪಿ, ಕುಂದಾಪುರ, ಕೊಕ್ಕರ್ಣೆ, ಬೆಳ್ಮಣ್ ಹಾಗೂ ಮೈಸೂರಿನಲ್ಲಿ ಚಿತ್ರದ ದೃಶ್ಯಗಳನ್ನು ಚಿತ್ರೀಕರಿ ಸಲಾಗಿದೆ. ಎರಡು ಕೋಟಿ ವೆಚ್ಚದಲ್ಲಿ ಚಿತ್ರವನ್ನು ನಿರ್ಮಿಸಿದ್ದು, ಅದ್ಧೂರಿಯಾಗಿ ಮೂಡಿಬಂದಿದೆ ಎಂದರು.

ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ನಾವು ಮುನ್ನ ಮೈಸೂರು ಸಂಗೀತ ನೀಡಿದ್ದಾರೆ. ಸತೀಶ್ ರಾಜೇಂದ್ರನ್ ಛಾಯಾಗ್ರಾಹಕ ಚಿತ್ರಕ್ಕಿದೆ. ಇತ್ತೀಚಿಗಷ್ಟೇ ಬೆಂಬಿಡದ ನಾವಿಕ ಸಿನಿಮಾದ ಟೀಸರ್ ಬಿಡುಗಡೆ ಆಗಿದ್ದು, ಉತ್ತಮ ರೆಸ್ಪಾನ್ಸ್ ಪಡೆದುಕೊಂಡಿದೆ. ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ಇದಕ್ಕೆ ಧ್ವನಿ ನೀಡಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಹಾಯಕ ನಿರ್ದೇಶಕ ಮಹೇಂದ್ರ, ಮಧುಮತಿ, ಲಿಂಗಯ್ಯ ಪಿ. ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News