ಪಡುಬಿದ್ರೆ: ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ನಿ. ವತಿಯಿಂದ 73ನೇ ಅಖಿಲ ಭಾರತ ಸಹಕಾರ ಸಪ್ತಾಹ ಉದ್ಘಾಟನೆ ಕಾರ್ಯಕ್ರಮವು ರೋಟರಿ ಕ್ಲಬ್ ಪಡುಬಿದ್ರೆ ಇದ ಸಹಕಾರದಲ್ಲಿ ಹೆಜಮಾಡಿ ಕೋಡಿಯ ವಿದ್ಯಾ ಪ್ರಸಾರ ಇಂಗ್ಲಿಷ್ ಮೀಡಿಯಂ ಶಾಲೆಯಲ್ಲಿ ನಡೆಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರೋಟರಿ ವಲಯ 5ರ ಸಹಾಯಕ ಗವರ್ನರ್ ಸುರೇಶ್ ನಾಯಕ್ ಸಪ್ತಾಹಕ್ಕೆ ಚಾಲನೆ ನೀಡಿದರು. ಇದೇವೇಳೆ ವಿದ್ಯಾಪ್ರಸಾರ ಇಂಗ್ಲಿಷ್ ಮೀಡಿಯಂ ಶಾಲೆಗೆ ಪಡುಬಿದ್ರಿ ಸಹಕಾರಿ ವ್ಯವಸಾಯಿಕ ಸೊಸೈಟಿ ವತಿಯಿಂದ ಕೊಡುಗೆಯಾಗಿ ನೀಡಲಾದ ಕುಡಿಯುವ ಶುದ್ದ ನೀರಿನ ಘಟಕವನ್ನು ಸೊಸೈಟಿಯ ಉಪಾಧ್ಯಕ್ಷ ಗುರುರಾಜ್ ಪೂಜಾರಿ ಹಾಗೂ ಶಾಲಾ ಅಧ್ಯಕ್ಷ ದಯಾನಂದ ಹೆಜಮಾಡಿ ಉದ್ಘಾಟಿಸಿದರು.

ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಸಹಕಾರದ ಬಗ್ಗೆ ಆಯೋಜಿಸಿದ್ದ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು.

ಸೊಸೈಟಿಯ ನಿರ್ದೇಶಕರಾದ ಶಿವರಾಮ ಎನ್ ಶೆಟ್ಟಿ, ರಸೂಲ್ ವೈ.ಜಿ., ವಾಸುದೇವ ದೇವಾಡಿಗ, ರಾಜಾರಾಮ ರಾವ್, ರೋಹಿಣಿ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ನಿಶ್ಮಿತಾ ಪಿ.ಎಚ್., ಸಹಾಯಕ ಕಾರ್ಯನಿರ್ವಹಣಾಧಿಕಾರಿ ದೀಪಕ್ ಸಾಲ್ಯಾನ್, ವಿದ್ಯಾಪ್ರಸಾರ ಇಂಗ್ಲಿಷ್ ಮೀಡಿಯಂ ಚೇರ್ಮ್ಯಾನ್ ವಿನೋದ್ ಕೋಟ್ಯಾನ್, ಪ್ರಾಂಶುಪಾಲೆ ರಾಜೇಶ್ವರಿ ಎಸ್. ಕರ್ಕೇರ, ಶಾಲಾ ಸಿಬ್ಬಂದಿ ವೃಂದ, ರೋಟರಿ ಕ್ಲಬ್ ಪಡುಬಿದ್ರೆ ಮಾಜಿ ಉಪಾಧ್ಯಕ್ಷ ಸುನೀಲ್, ಕಾರ್ಯದರ್ಶಿ ಕಾರ್ತಿಕ್, ಸದಸ್ಯೆ ಜ್ಯೋತಿ ಮೆನನ್ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor