×
Ad

ಪರ್ಕಳ: ಅಕ್ರಮ ದಾಸ್ತಾನು ಇರಿಸಿದ್ದ 760 ಕೆ.ಜಿ. ಪಟಾಕಿ ವಶ; ಪ್ರಕರಣ ದಾಖಲು

Update: 2023-10-11 18:57 IST

ಮಣಿಪಾಲ, ಅ.11: ಪರ್ಕಳದ ಅಂಗಡಿಯೊಂದರಲ್ಲಿ ಅಕ್ರಮವಾಗಿ ದಾಸ್ತಾನು ಇರಿಸಲಾದ ಲಕ್ಷಾಂತರ ರೂ. ಮೌಲ್ಯದ ಪಟಾಕಿಯನ್ನು ಮಣಿಪಾಲ ಪೊಲೀಸರು ಇಂದು ಬೆಳಗ್ಗೆ ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯಂತೆ ಮಣಿಪಾಲ ಪೊಲೀಸ್ ನಿರೀಕ್ಷಕ ದೇವರಾಜ್ ಟಿ.ವಿ. ನೇತೃತ್ವದಲ್ಲಿ ತಂಡ ಪರ್ಕಳ ಮುಖ್ಯಪೇಟೆಯ ದಿನಸಿ ಅಂಗಡಿಯ ಹಿಂಬದಿಯಲ್ಲಿದ್ದ ಶಿವಪ್ರಸಾದ್ ಠಾಕೂರು ಎಂಬವರ ಗೋಡಾನ್‌ಗೆ ದಾಳಿ ನಡೆಸಿದ್ದು, ಪರವಾನಿಗೆ ಇಲ್ಲದೆ ಅಕ್ರಮವಾಗಿ ದಾಸ್ತಾನು ಇರಿಸಿದ್ದ ಸುಮಾರು 760 ಕೆ.ಜಿ. ತೂಕದ ಪಟಾಕಿಗಳನ್ನು ವಶಪಡಿಸಿಕೊಂಡಿದೆ.

ಇದರ ಮೌಲ್ಯ ಸುಮಾರು 1.25ಲಕ್ಷ ರೂ. ಎಂದು ಅಂದಾಜಿಸಲಾಗಿದೆ. ಈ ಸಂದರ್ಭದಲ್ಲಿ ಉಡುಪಿ ತಹಶೀಲ್ದಾರ್ ಭೀಮಸೇನಾ ಕುಲಕರ್ಣಿ ಹಾಜರಿದ್ದರು. ಈ ಬಗ್ಗೆ ಶಿವಪ್ರಸಾದ್ ಠಾಕೂರು ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News