×
Ad

ಕರ್ನಾಟಕ ಅಂಚೆ ವೃತ್ತದ ಫಿಲಾಟೆಲಿ ವೃತ್ತ ಮಟ್ಟದ ಪ್ರಶಸ್ತಿ ಪ್ರದಾನ

Update: 2024-11-02 14:28 IST

ಕಾರ್ಕಳ : ಉಡುಪಿ ಅಂಚೆ ವಿಭಾಗದ ಪೂರ್ಣಿಮಾ ಜನಾರ್ದನ್ ಅವರಿಗೆ (ವಿಶೇಷ ಕವರ್,ಚಿತ್ರ ಅಂಚೆ ಕಾರ್ಡ್‌ಗಳು,ಕಸ್ಟಮೈಸ್ ಅಂಚೆ ಚೀಟಿಗಳು,ಮತ್ತು ಸ್ಮರಣಾರ್ಥ ಅಂಚೆ ಚೀಟಿಗಳು ವಿಭಾಗ) ಸರ್ವಶ್ರೇಷ್ಠ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಪ್ರಶಸ್ತಿಯನ್ನು ಅಂಚೆ ಸಪ್ತಾಹದ ಸಂದರ್ಭದಲ್ಲಿ ನಡೆದ ಫಿಲಾಟಲಿ ದಿನದಂದು ಕರ್ನಾಟಕ ಅಂಚೆ ವೃತ್ತದ ಮುಖ್ಯ ಪೋಸ್ಟ್‌ ಮಾಸ್ಟರ್ ಜನರಲ್ ಎಸ್ ರಾಜೇಂದ್ರ ಕುಮಾರ್ ರವರು ಬೆಂಗಳೂರು ಜನರಲ್ ಪೋಸ್ಟ್ ಆಫೀಸ್ ನ ಮೇಘದೂತ ಮಿನಿ ಸಭಾಂಗಣದಲ್ಲಿ ಪ್ರದಾನ ಮಾಡಿದರು.

ಈ ಸಂದರ್ಭದಲ್ಲಿ ,ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಾ.ಚಂದ್ರಶೇಖರ್ ಕಾಕುಮಾನು, ಬೆಂಗಳೂರು ಎಚ್ ಕ್ಯೂ ರೀಜನ್ ನ ಪೋಸ್ಟ್ ಮಾಸ್ಟರ್ ಜನರಲ್ ಎಲ್ ಕೆ ಡಾಶ್, ,ಡೈರೆಕ್ಟರ್ ಆಫ್ ಪೋಸ್ಟಲ್ ಸರ್ವೀಸಸ್( ಎಚ್ ಕ್ಯೂ) ಬೆಂಗಳೂರು ಕೈರಾ ಅರೋರಾ, ಹಾಗು ಡೈರೆಕ್ಟರ್ ಆಫ್ ಪೋಸ್ಟಲ್ ಸರ್ವೀಸಸ್ ದಕ್ಷಿಣ ಕರ್ನಾಟಕ ವಲಯ,ಬೆಂಗಳೂರು,ಸಂದೇಶ್ ಮಹಾದೇವಪ್ಪ ಉಪಸ್ಥಿತಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News