ಬ್ರಹ್ಮಾವರ | ಸಾಮಾಜಿಕ ಜಾಲತಾಣದಲ್ಲಿ ದ್ವೇಷ ಹರಡುವ ಪೋಸ್ಟ್: ಇಬ್ಬರು ಆರೋಪಿಗಳ ಬಂಧನ
Update: 2026-01-30 12:49 IST
ಬ್ರಹ್ಮಾವರ : ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷ ಹರಡಿಸುವ ಪೋಸ್ಟ್ ಹಾಕಿದ ಪ್ರಕರಣಕ್ಕೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಬ್ರಹ್ಮಾವರ ಪೊಲೀಸರು ಬಂಧಿಸಿದ್ದಾರೆ.
ಬ್ರಹ್ಮಾವರ ವಾರಂಬಳ್ಳಿ ಗ್ರಾಮದ ಮೂಡು ಗರಡಿ ರಸ್ತೆಯ ಸಂತೋಷ ಕುಮಾರ್ ಶೆಟ್ಟಿ(56) ಹಾಗೂ ಕೋಟೇಶ್ವರ ಗ್ರಾಮದ ಹಾಲಾಡಿ ರೋಡ್‌ನ ಕೆ.ನಾಗರಾಜ(62) ಬಂಧಿತ ಆರೋಪಿಗಳು.
ಸಾಮಾಜಿಕ ಜಾಲತಾಣಗಳಲ್ಲಿ ಧರ್ಮಧರ್ಮಗಳ ಮಧ್ಯೆ ದ್ವೇಷ ಹರಡಿಸುವಂತಹ ವಿಡಿಯೋ ಹಾಕಿದ ಬಗ್ಗೆ ಇವರಿಬ್ಬರ ವಿರುದ್ಧ ಜ.29ರಂದು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಉಡುಪಿ ಡಿವೈಎಸ್ಪಿ ಪ್ರಭು ಡಿ.ಟಿ. ಮತ್ತು ಬ್ರಹ್ಮಾವರ ಪೊಲೀಸ್ ವೃತ್ತ ನಿರೀಕ್ಷಕ ಗೋಪಿಕೃಷ್ಣ ಮಾರ್ಗದರ್ಶನದಲ್ಲಿ ಬ್ರಹ್ಮಾವರ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ಅಶೋಕ ಮಾಳಾಬಗಿ, ಸುದರ್ಶನ್ ದೊಡಮನಿ ಹಾಗೂ ಠಾಣಾ ಸಿಬ್ಬಂದಿ ಈ ಕಾರ್ಯಾಚರಣೆ ನಡೆಸಿದ್ದಾರೆ.