×
Ad

ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ನಾಯಕತ್ವ ಮುಖ್ಯ: ಡಾ.ಗಣನಾಥ್ ಎಕ್ಕಾರು

Update: 2024-08-21 17:20 IST

ಉಡುಪಿ, ಆ.21: ಸಮಾಜದ ಪರಿವರ್ತನೆಗೆ ಆಂತರಿಕ ಬದಲಾವಣೆ ಅಗತ್ಯವಿದೆ. ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ನಾಯ ಕತ್ವ ಮುಖ್ಯ, ರಾಜಕೀಯ ಅರಿವು ಬೆಳೆಸುವುದು ಮತ್ತು ಧರ್ಮ ಅಥವಾ ಇತರ ಕಟ್ಟುಪಾಡುಗಳಿಂದ ಮುಕ್ತವಾಗಿ ತೀರ್ಮಾನ ಮಾಡುವುದು ಅಗತ್ಯವಿದೆಂದು ರಾಜ್ಯ ಎನ್‌ಎಸ್‌ಎಸ್ ಮಾಜಿ ಅಧಿಕಾರಿ ಮತ್ತು ಕರ್ನಾಟಕ ಸರಕಾರದ ಪದನಿಮಿತ್ತ ಸಹಾಯಕ ಕಾರ್ಯದರ್ಶಿ ಡಾ.ಗಣನಾಥ ಶೆಟ್ಟಿ ಎಕ್ಕಾರು ಹೇಳಿದ್ದಾರೆ.

ಉಡುಪಿಯ ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಕಾಲೇಜು, ಆಸ್ಪತ್ರೆ ಹಾಗೂ ಸಂಶೋಧನ ಕೇಂದ್ರದ 2024-25ನೇ ಸಾಲಿನ ವಿದ್ಯಾರ್ಥಿ ಪರಿಷತ್‌ನ್ನು ಇತ್ತೀಚೆಗೆ ಭಾವಪ್ರಕಾಶ ಸಭಾಂಗಣದಲ್ಲಿ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಹೊಸದಾಗಿ ನೇಮಿಸಲಾದ ವಿದ್ಯಾರ್ಥಿ ಸಂಘಟನೆಗೆ ಅಭಿನಂದನೆ ಸಲ್ಲಿಸಿದರು. ವೈದ್ಯಕೀಯ ಅಧೀಕ್ಷಕ ಡಾ.ನಾಗರಾಜ್ ಎಸ್, ವಿವಿಧ ವಿಭಾಗಗಳ ಡೀನ್ ಗಳಾದ ಡಾ.ವೀರಕುಮಾರ ಕೆ., ಡಾ.ಶ್ರೀಲತಾ ಕಾಮತ್, ಡಾ.ಅಶೋಕ್ ಕುಮಾರ್ ಬಿ.ಎನ್., ಡಾ.ರಜನೀಶ್ ವಿ.ಗಿರಿ, ಸ್ನಾತಕೋತ್ತರ ವಿದ್ಯಾರ್ಥಿ ಗಳಾದ ಡಾ.ಶಿಖಾ ಸಹೋರೆ ಮತ್ತು ಡಾ.ಕೊಟ್ರೇಶ್ ಬಿ.ಎಂ. ಉಪಸ್ಥಿತರಿದ್ದರು.

ಮಾಜಿ ವಿದ್ಯಾರ್ಥಿ ಕೌನ್ಸಿಲ್ ಅಧ್ಯಕ್ಷೆ ಮೇಘನಾ. ಜಿ. ಕೆ. ಹಾಗೂ ಅರುಣ್ ಕಂಕಟ್ಟೆ 2023- 24ನೇ ಸಾಲಿನ ವಾರ್ಷಿಕ ವರದಿಯನ್ನು ನೂತನ ಅಧ್ಯಕ್ಷ ಗುರುಗೋವಿಂದ ಎಚ್.ಯು. ಮತ್ತು ಕಾರ್ಯದರ್ಶಿ ಸ್ವಸ್ಥಿ ಎನ್.ಶೆಟ್ಟಿ ಅವರಿಗೆ ಹಸ್ತಾಂತರಿಸಿದರು.

ಹೊಸದಾಗಿ ನೇಮಿಸಲಾದ ಸ್ನಾತಕ ಹಾಗೂ ಸ್ನಾತಕೋತ್ತರ ಪರಿಷತ್ತಿನ ಪದಾಧಿಕಾರಿಗಳ ಹೆಸರನ್ನು ಡಾ.ರಜನೀಶ್ ವಿ.ಗಿರಿ ಮತ್ತು ಡಾ. ಆಶೋಕ್ ಕುಮಾರ್ ಬಿ.ಎನ್. ಘೋಷಿಸಿದರು. ಡಾ.ವೀರಕುಮಾರ ಕೆ. ಪ್ರಮಾಣವಚನ ಬೋಧಿಸಿ ದರು. ಬಿ.ಭಾರ್ಗವಿ ಬಾಳಿಗ ಕಾರ್ಯಕ್ರಮ ನಿರ್ವಹಿಸಿದರು. ಸಹಾ ಯಕ ಪ್ರಾಧ್ಯಾಪಕಿ ಡಾ.ಸುಷ್ಮಿತಾ ವಿ.ಎಸ್. ಕಾರ್ಯಕ್ರಮ ಸಂಯೋಜಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News