ಸೇನಾಪುರದಲ್ಲಿ ಹಳಿ ಕಾಮಗಾರಿ; ಆ.14ರಂದು ರೈಲು ಸಂಚಾರ ವ್ಯತ್ಯಯ
Update: 2025-08-12 21:24 IST
ಉಡುಪಿ, ಆ.12: ಕೊಂಕಣ ರೈಲು ಮಾರ್ಗದ ಸೇನಾಪುರ ರೈಲು ನಿಲ್ದಾಣದ ಪ್ರಧಾನ ಹಳಿಯಲ್ಲಿ ಆ.14ರ ಗುರುವಾರದಂದು ಕೆಲವು ಕಾಮಗಾರಿಗಳು ನಡೆಯಲಿರುವುದರಿಂದ ಕೆಲವು ರೈಲುಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.
ಇದರಿಂದ ಆ.13ರಂದು ಪುಣೆ ಜಂಕ್ಷನ್‌ನಿಂದ ಹೊರಡುವ ರೈಲು ನಂ.22150 ಪುಣೆ ಜಂಕ್ಷನ್- ಎರ್ನಾಕುಲಂ ಜಂಕ್ಷನ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಕಾರವಾರ- ಬಿಜೂರು ನಡುವೆ ಒಂದು ಗಂಟೆ ಕಾಲ ತಡೆ ಹಿಡಿಯಲಾಗುವುದು ಎಂದು ಪ್ರಕಟಣೆ ತಿಳಿಸಿದೆ.