ಉಡುಪಿ ಎಲ್‌ವಿಟಿ ದೇವಳದ ಶಾರದ ದೇವಿ ವಿಸರ್ಜನೆ
ಉಡುಪಿ, ಅ.26: ಉಡುಪಿ ತೆಂಕಪೇಟೆಯ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನ ದಲ್ಲಿ ಪೂಜಿತ ಶಾರದೆ ದೇವಿಗೆ ದೇವಳದ ಅರ್ಚಕ ದಯಾಘನ್ ಭಟ್ ಮಹಾ ಮಂಗಳಾರತಿ ಬೆಳಗಿಸಿ ಶೋಭಾಯಾತ್ರೆಗೆ ಬುಧವಾರ ಸಂಜೆ ಚಾಲನೆ ನೀಡಿದರು.
ಶಾರದಾ ದೇವಿಯ ಉತ್ಸವ ದೇವಾಲಯದಿಂದ ಹೊರಟು ಐಡಿಯಲ್ ಸರ್ಕಲ್, ಡಯಾನಾ ಸರ್ಕಲ್, ತ್ರಿವೇಣಿ ಸರ್ಕಲ್, ಚಿತ್ತರಂಜನ್ ಸರ್ಕಲ್, ಕೊಳದಪೇಟೆ ಮೂಲಕ ದೇವಾಲಯಕ್ಕೆ ಬಂದು ದೇವಾಲಯದ ಪದ್ಮ ಸರೋವರದಲ್ಲಿ ಶಾರದಾ ಮುರ್ತಿ ವಿಸರ್ಜನೆ ಮಾಡಲಾಯಿತು.
ಶೋಭಾಯಾತ್ರೆಯಲ್ಲಿ ಉಡುಪಿ ನಗರವನ್ನು ತಳಿರು ತೋರಣ ವಿದ್ಯುತ್ ದೀಪಗಳಿಂದ ಅಲಂಕರಿತಗೊಳಿಸಲಾಗಿತ್ತು. ಕೀಳು ಕುದುರೆ, ತಟ್ಟೀರಾಯ, ಸ್ಥಬ್ದ ಚಿತ್ರಗಳಾದ ವೆಂಕಟರಮಣ, ಶ್ರೀದೇವಿ, ನರಸಿಂಹ ಅವತಾರ, ಹತ್ತು ತಲೆಯ ರಾವಣ, ನಾಸಿಕ್ ಬ್ಯಾಂಡ್, ಚಂಡೆ ಮೇಳ, ಟಸ್ಸಲೆ ಮಂಗಳ ವಾದ್ಯಗಳು ಗಮನ ಸೆಳೆಯಿತು.
ಈ ಸಂದರ್ಭದಲ್ಲಿ ದೇವಳದ ಆಡಳಿತ ಮೊಕ್ತೇಸರ ಪಿ.ವಿ.ಶೆಣೈ, ವಸಂತ್ ಕಿಣಿ, ವಿಶ್ವನಾಥ್ ಭಟ್, ಪುಂಡಲೀಕ್ ಕಾಮತ, ಗಣೇಶ್ ಕಿಣಿ, ಶಾಸಕ ಯಶಪಾಲ್ ಸುವರ್ಣ, ವಿನಾಯಕ ಭಟ್, ದಿವಾಕರ ಭಟ್, ದೀಪಕ್ ಭಟ್, ಗಿರೀಶ ಭಟ್, ನರಹರಿ ಪೈ, ವಿಶಾಲ್ ಶೆಣೈ, ಉಮೇಶ್ ಪೈ, ಶಾಮ್ ಪ್ರಸಾದ್ ಕುಡ್ವ, ಮಾಜಿ ಶಾಸಕ ರಘುಪತಿ ಭಟ್, ಅಮೃತ ಶೆಣೈ, ನಿತೇಶ, ನಾಗೇಶ್ ಪ್ರಭು, ಮಟ್ಟಾರ್ ಸತೀಶ್ ಕಿಣಿ, ಭಾಸ್ಕರ್ ಶೆಣೈ, ವಿವೇಕ ಶೆಣೈ ಮೊದಲಾದವರು ಉಪಸ್ಥಿತರಿದ್ದರು.