ಜೈಂಟ್ಸ್ ಗ್ರೂಪ್ ಉಡುಪಿ ವತಿಯಿಂದ ಸ್ಟೀಲ್ ಕಪಾಟು ಕೊಡುಗೆ
Update: 2024-02-29 14:31 IST
ಉಡುಪಿ: ಜೈಂಟ್ಸ್ ಗ್ರೂಪ್ ವತಿಯಿಂದ ಡೊಣ್ಣಗುಡ್ಡೆ ಜನತಾ ಅಂಗನವಾಡಿ ಶಾಲೆಗೆ ಸ್ಟೀಲ್ ಕಪಾಟನ್ನು ಕೊಡುಗೆಯಾಗಿ ನೀಡಲಾಯಿತು.
ಈ ಸಂದರ್ಭದಲ್ಲಿ ಕೇಂದ್ರ ಸಮಿತಿ ಸದಸ್ಯ ದಿನಕರ ಅಮೀನ್, ಫೆಡರೇಷನ್ ನ ಉಪಾಧ್ಯಕ್ಷ ತೇಜೇಶ್ವರ್ ರಾವ್, ಜೈಂಟ್ಸ್ ಉಡುಪಿ ಅಧ್ಯಕ್ಷ ಯಶವಂತ್ ಸಾಲಿಯಾನ್, ಮಾಜಿ ಅಧ್ಯಕ್ಷ ಎಂ.ಇಕ್ಬಾಲ್ ಮನ್ನಾ, ಆಡಳಿತ ನಿರ್ದೇಶಕ ವಾದಿರಾಜ್ ಸಾಲಿಯಾನ್, ಕಾರ್ಯಕ್ರಮ ಪ್ರಾಯೋಜಕ ವಿನಯ್ ಕುಮಾರ್ ಪೂಜಾರಿ, ಹಣಕಾಸು ನಿರ್ದೇಶಕ ದಿವಾಕರ ಪೂಜಾರಿ, ಆರೋಗ್ಯಾಧಿಕಾರಿ ಲಕ್ಷ್ಮೀದೇವಿ, ಸಿಬ್ಬಂದಿಗಳಾದ ಸುಮನಾ, ರೇಖಾ, ಭಾವನ ದಿನೇಶ್, ಭಾರತಿ, ವಸಂತಿ, ಆಶಾ, ರೂಪಾ, ಉಷಾ, ಸುವರ್ಣ ಜೋಗಿ, ವಿದ್ಯಾ ಹಾಗೂ ಮಕ್ಕಳು ಉಪಸ್ಥಿತರಿದ್ದರು.
ತೇಜೇಶ್ವರ ರಾವ್ ಸಭೆಯನ್ನುದ್ದೇಶಿಸಿ ಮಾತನಾಡಿದರು. ನಿರ್ದೇಶಕ ಗಣೇಶ್ ಉರಾಳ್ ಸ್ವಾಗತಿಸಿ, ವಂದಿಸಿದರು.