ಬಾವಿಗೆ ಹಾರಿ ಆತ್ಮಹತ್ಯೆ
Update: 2023-07-30 20:52 IST
ಹಿರಿಯಡ್ಕ, ಜು.30: ವಿಪರೀತ ಕುಡಿತದ ಚಟ ಹೊಂದಿದ್ದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಜು.27ರ ಮಧ್ಯಾಹ್ನದಿಂದ 29ರ ಸಂಜೆಯ ಮಧ್ಯಾವಧಿಯಲ್ಲಿ ಕೊಡಿಬೆಟ್ಟು ಎಂಬಲ್ಲಿ ನಡೆದಿದೆ.
ಮೃತರನ್ನು ಕೊಡಿಬೆಟ್ಟು ನಿವಾಸಿ ವಾಸು(62) ಎಂದು ಗುರುತಿಸಲಾಗಿದೆ.
ವಿಪರೀತ ಕುಡಿತದ ಚಟವನ್ನು ಹೊಂದಿದ್ದ ಇವರು, ಮಾನಸಿಕವಾಗಿ ನೊಂದು ಜೀವನಲ್ಲಿ ಜಿಗುಪ್ಸೆಗೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಕೊಂಡಿ ದ್ದಾರೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.