Udupi | ಬ್ರಹ್ಮಗಿರಿ ಸರ್ಕಲ್‌ನಲ್ಲಿ ಮತ್ತೆ ಬಾಯ್ತೆರೆದ ಗುಂಡಿಗಳು: ಕ್ರಮಕ್ಕೆ ಆಗ್ರಹ
Update: 2026-07-28 17:15 IST
ಉಡುಪಿ : ನಗರದ ಪ್ರಮುಖ ವಾಹನ ದಟ್ಟನೆಯ ಜಂಕ್ಷನ್ ಆಗಿರುವ ಬ್ರಹ್ಮಗಿರಿ ಸರ್ಕಲ್‌ನಲ್ಲಿ ಮತ್ತೆ ಗುಂಡಿಗಳು ಬಾಯ್ತೆರೆದಿದ್ದು, ಇದರಿಂದ ಸದಾ ವಾಹನ ಸಂಚಾರದಿಂದ ಕೂಡಿರುವ ಈ ಸರ್ಕಲ್‌ನಲ್ಲಿ ಅಪಘಾತದ ಭೀತಿ ಎದುರಾಗಿದೆ.
ಕೆಲವು ದಿನಗಳ ಹಿಂದೆ ಬ್ರಹ್ಮಗಿರಿ ಸರ್ಕಲ್‌ನಲ್ಲಿದ್ದ ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, ವಾಹನ ಸಂಚಾರ ಸುಗಮವಾಗಿ ಸಾಗುತ್ತಿತ್ತು. ಆದರೆ ಇದೀಗ ಅದೇ ಗುಂಡಿಗಳು ಮತ್ತೆ ಬಾಯ್ತೆರೆದಿದ್ದು, ಸಾರ್ವಜನಿಕರಿಗೆ ಹಾಗೂ ವಾಹನ ಸವಾರರಿಗೆ ತೀವ್ರ ಆತಂಕ ಉಂಟುಮಾಡಿವೆ.
ವಿಶೇಷವಾಗಿ ತಿರುವಿನಲ್ಲೇ ಇರುವ ಈ ಗುಂಡಿಗಳು ದ್ವಿಚಕ್ರ ವಾಹನ ಸವಾರರಿಗೆ ಅತ್ಯಂತ ಅಪಾಯಕಾರಿ ಆಗಿದ್ದು, ಯಾವುದೇ ಕ್ಷಣದಲ್ಲಿ ಅಪಘಾತ ಸಂಭವಿಸುವ ಸಾಧ್ಯತೆ ಇದೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಈ ರಸ್ತೆ ಗುಂಡಿಗಳನ್ನು ದುರಸ್ತಿಗೊಳಿಸಿ, ಸಂಭವಿಸಬಹುದಾದ ಅನಾಹುತಗಳನ್ನು ತಪ್ಪಿಸಬೇಕೆಂದು ಸ್ಥಳೀಯ ಸಮಾಜ ಸೇವಕ ಎಂ.ಇಕ್ಬಾಲ್ ಮನ್ನಾ ಆಗ್ರಹಿಸಿದ್ದಾರೆ.