ಉಡುಪಿ| ಅಕ್ರಮ ಕೋಣ ಸಾಗಾಟ ಪ್ರಕರಣ: 4 ಮಂದಿ ಆರೋಪಿಗಳ ಬಂಧನ
Update: 2025-08-22 22:09 IST
ಶಂಕರನಾರಾಯಣ, ಆ.22: ಗೂಡ್ಸ್ ವಾಹನದಲ್ಲಿ ಅಕ್ರಮವಾಗಿ ಕೋಣಗಳನ್ನು ಸಾಗಿಸುತ್ತಿದ್ದ ನಾಲ್ವರು ಆರೋಪಿಗಳನ್ನು ಶಂಕರನಾರಾಯಣ ಪೊಲೀಸರು ಅ.22ರಂದು ಬೆಳಗ್ಗೆ 6 ಗಂಟೆ ಸುಮಾರಿಗೆ ಶಂಕರನಾರಾಯಣ ಜಂಕ್ಷನ್ ಸಮೀಪ ಬಂಧಿಸಿದ್ದಾರೆ.
ಶಾಂತೇಶ ಚಂದ್ರಪ್ಪ ಜಾವಳ್ಳಿ, ಹಿನಾಯತ್ ನಾಸಿಪುಡಿ, ಸುನೀಲ್ ಲಕ್ಷ್ಮಪ್ಪ ಜಾವಳ್ಳಿ, ಅರುಣ ಚಂದ್ರಪ್ಪ ಜಾವಳ್ಳಿ ಬಂಧಿತ ಆರೋಪಿಗಳು.
ಇವರಿಂದ 8 ಲಕ್ಷ ರೂ. ಮೌಲ್ಯದ ಗೂಡ್ಸ್ ಟೆಂಪೋ ಹಾಗೂ ಅದರಲ್ಲಿದ್ದ 50 ಸಾವಿರ ರೂ. ಮೌಲ್ಯದ 5 ಕೋಣ ಹಾಗೂ 30ಸಾವಿರ ರೂ. ಮೌಲ್ಯದ 3 ಎಮ್ಮೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.