×
Ad

ಉಡುಪಿ ಮಿಷನ್ ಆಸ್ಪತ್ರೆ ವತಿಯಿಂದ ವಾರ್ಷಿಕ ಕ್ರೀಡಾಕೂಟ

Update: 2024-03-17 15:42 IST

ಉಡುಪಿ, ಮಾ.17: ಉಡುಪಿ ಸಿಎಸ್ಐ ಲೊಂಬಾರ್ಡ್ ಸ್ಮಾರಕ(ಮಿಷನ್) ಆಸ್ಪತ್ರೆ ಹಾಗೂ ಸಮೂಹ ಸಂಸ್ಥೆಗಳ ವತಿಯಿಂದ ವಾರ್ಷಿಕ ಕ್ರೀಡಾಕೂಟವನ್ನು ಶನಿವಾರ ಉಡುಪಿ ಕ್ರಿಶ್ಚಿಯನ್ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಆಯೋಜಿಸಲಾಗಿತ್ತು.

ಉಡುಪಿ ಸಿಎಸ್ಐ ಜುಬಿಲಿ ದೇವಾಲಯದ ಸಭಾಪಾಲಕ ರೆವೆ. ಕಿಶೋರ್ ಕುಮಾರ್ ಕ್ರೀಡಾ ಜ್ಯೋತಿ ಬೆಳಗುವುದರ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ವೇದಿಕೆಯಲ್ಲಿ ಲೊಂಬಾರ್ಡ್ ಸಮೂಹ ಸಂಸ್ಥೆಗಳ ಪ್ರಾಂಶು ಪಾಲರುಗಳಾದ, ಡಾ.ಸುಜಾ ಕರ್ಕಡ, ವೀಣಾ ಮೆನೆಜಸ್, ಡಾ.ರೋಶನ್ ಪಾಯಸ್ ಹಾಗೂ ಉಪ ಪ್ರಾಂಶುಪಾಲ ಡಾ.ಬಿ.ಎನ್.ಪೆರಳಾಯ, ಲೊಂಬಾರ್ಡ್ ಆಸ್ಪತ್ರೆಯ ಆಡಳಿತಾಧಿಕಾರಿ ದೀನಾ ಪ್ರಭಾವತಿ ಹಾಗೂ ಆಸ್ಪತ್ರೆಯ ಚಾಪ್ಲಿನ್ ರೆವೆ.ರೇಚಲ್ ಡಿಸಿಲ್ವ ಉಪಸ್ಥಿತರಿದ್ದರು.

ನಂತರ ವಿಧ್ಯಾರ್ಥಿಗಳಿಂದ ಪಥ ಸಂಚಲನ ನಡೆಯಿತು. ವಿಧ್ಯಾರ್ಥಿಗಳಿಗೆ ಹಾಗೂ ಸಿಬ್ಬಂದಿಗಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆದವು. ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ರಾಷ್ಟ್ರೀಯ ಕ್ರೀಡಾಪಟು ಸ್ಯಾಂಡ್ರಾ ಎನ್ಸಿಲ್ಲಾ ಡಿಸೋಜ ವಿಜೇತರಿಗೆ ಬಹುಮಾನ ವಿತರಿಸಿದರು.

ಕ್ರೀಡಾ ಶಿಕ್ಷಕರಾದ ದಾಮೋದರ್ ಹಾಗೂ ಸಂತೋಷ್ ಶೆಟ್ಟಿ, ಆಟೋಟ ಗಳಲ್ಲಿ ತೀರ್ಪುಗಾರರಾಗಿದ್ದರು. ರೋಹಿಣಿ ಶಣೈ ಸ್ವಾಗತಿಸಿದರು. ಹೇಮಲತಾ ಬಂಗೇರ ವಂದಿಸಿದರು. ರೀನಾ ಡಿಸೋಜ, ರಿಶಾ ಹಾಗೂ ಸಾರಾ ಕಾರ್ಯಕ್ರಮ ನಿರೂಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News