×
Ad

ಉಡುಪಿ: ಈಜುಪಟು ರೊನ್ನಾನ್ ಲೂವಿಸ್ ಇಂಡಿಯಾ ಬುಕ್ ಆಫ್ ರೆರ್ಕಾಡ್ಸ್ ದಾಖಲೆ

Update: 2023-11-30 22:01 IST

ಉಡುಪಿ, ನ.30: ನೀರಿನಡಿಯಲ್ಲಿ 50 ಮೀಟರ್ ದೂರವನ್ನು ಅತ್ಯಂತ ವೇಗವಾಗಿ ಕ್ರಮಿಸುವ ಮೂಲಕ ಈಜುಪಟು ರೊನ್ನಾನ್ ಶ್ರೈನ್ ಲೂವಿಸ್(17) ಇಂಡಿಯಾ ಬುಕ್ ಆಫ್ ರೆರ್ಕಾಡ್ಸ್ ದಾಖಲೆ ನಿರ್ಮಿಸಿದ್ದಾರೆ.

ಉಡುಪಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ದಾಖಲೆಯ ಪ್ರಮಾಣಪತ್ರವನ್ನು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಈಜುಪಟು ರೊನ್ನಾನ್ ಅವರಿಗೆ ಹಸ್ತಾಂತರಿಸಿದರು. ಇವರು ಉಡುಪಿ ಬ್ರಹ್ಮಗಿರಿಯ ರೋಶನ್ ಲೂವಿಸ್ ಮತ್ತು ಶೈಲಾ ಲೂವಿಸ್ ದಂಪತಿ ಪುತ್ರ.

ಸೆಪ್ಟಂಬರ್ ತಿಂಗಳಲ್ಲಿ ಮಂಗಳೂರಿನ ಮಂಗಳ ಕ್ರೀಡಾಂಗಣದ ಈಜು ಕೊಳ ದಲ್ಲಿ ಅವರು ಈ ಸಾಧನೆ ಮಾಡಿದ್ದಾರೆ. ನೀರಿನೊಳಗೆ 50ಮೀಟರ್ ದೂರ ವನ್ನು 54ಸೆಕೆಂಡ್‌ನಲ್ಲಿ ಕ್ರಮಿಸಿದ್ದಾರೆ. ಇವರು ಉಡುಪಿ ಸೈಂಟ್ ಸಿಲಿಲಿಸ್ ಪದವಿ ಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿ ಯಾಗಿದ್ದಾರೆ.

ಚಂದ್ರಶೇಖರ್ ಶೆಟ್ಟಿ ಮತ್ತು ಗೋಪಾಲ ಖಾರ್ವಿ ಇವರ ಈಜು ಗುರು ಗಳಾಗಿದ್ದಾರೆ. ಮುಂದೆ ರೊನ್ನಾನ್ ನೀರಿನಡಿಯಲ್ಲಿ 250 ಮೀಟರ್ ದೂರ ಕ್ರಮಿಸುವ ಮೂಲಕ ಗಿನ್ನೆಸ್ ದಾಖಲೆ ನಿರ್ಮಿಸುವ ಸಿದ್ಧತೆಯಲ್ಲಿದ್ದಾರೆ. ಅದಕ್ಕೆ ಬೇಕಾದ ತರಬೇತಿಯನ್ನು ಅವರು ಪಡೆಯುತ್ತಿದ್ದಾರೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಸಾಮಾಜಿಕ ಕಾರ್ಯಕರ್ತ ರಾಘವೇಂದ್ರ ಪ್ರಭು ಕರ್ವಾಲು, ರೋಶನ್ ಲೂವಿಸ್ ಮತ್ತು ಶೈಲಾ ಲೂವಿಸ್ ಹಾಜರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News