×
Ad

ಉಡುಪಿ| ಕಾರಿನಲ್ಲಿ ಎಂಡಿಎಂಎ ಡ್ರಗ್ಸ್ ಸಾಗಾಟ: ಇಬ್ಬರು ಆರೋಪಿಗಳ ಬಂಧನ

Update: 2024-12-30 23:11 IST

ಉಡುಪಿ: ಕಾರಿನಲ್ಲಿ ನಿಷೇಧಿತ ಮಾದಕ ವಸ್ತು ಎಂ ಡಿ ಎಂ ಎ ಪೌಡರ್ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಕೊರಂಗ್ರಪಾಡಿ ಗ್ರಾಮದ ಕೆಮ್ತೂರು ರೈಲ್ವೇ ಬ್ರಿಡ್ಜ್‌ ಬಳಿ ಬಂಧಿಸಿದ್ದಾರೆ.

ಕಟಪಾಡಿ ಕೋಟೆ ಗ್ರಾಮದ ಅಕ್ಬರ್ (32), ಹಾಗೂ ಉಚ್ಚಿಲದ ಮುಕ್ದುಮ್ ಅಲಿ(28)‌ ಬಂಧಿತ ಆರೋಪಿಗಳು. ಇವರಿಂದ ಎಂಡಿಎಂಎ 69.127 ಗ್ರಾಂ , 6 ಮೊಬೈಲ್ ಪೋನ್, 1100ರೂ. ನಗದು, ಕಾರು, ಲ್ಯಾಪ್‌ಟಾಪ್ ಮತ್ತು ಇತರ ಸೊತ್ತು ಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಅಂದಾಜು ಮೌಲ್ಯ 20,11,900ರೂ. ಎಂದು ಅಂದಾಜಿಸಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಉಡುಪಿ ಡಿವೈಎಸ್ಪಿ ಪ್ರಭು ಡಿ ಟಿ , ಉಡುಪಿ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕ (ಪ್ರಭಾರ) ರಾಮಚಂದ್ರ ನಾಯಕ್, ಉಡುಪಿ ನಗರ ಪೊಲೀಸ್‌ ಠಾಣಾ ಉಪನಿರೀಕ್ಷಕರಾದ ಪುನೀತ್‌ ಕುಮಾರ್‌ ಬಿ, ಸುರೇಶ್.ಕೆ, ಅಬ್ದುಲ್ ಬಶೀರ್, ಹೇಮಂತ, ಆನಂದ, ಶಿವಕುಮಾರ್, ಸೆನ್ ಅಪರಾಧ ಠಾಣಾ ಸಿಬ್ಬಂದಿ ಪ್ರವೀಣ್ ಕುಮಾರ್, ಪ್ರವೀಣ್, ರಾಘವೇಂದ್ರ, ಮಾಯಪ್ಪ, ಪ್ರಶಾಂತ್ ಅವರನ್ನೊಳಗೊಂಡ ತಂಡ ಪಾಲ್ಗೊಂಡಿದೆ.

ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News