×
Ad

ನಾಳೆ (ನ.28) ಬೆಳಗ್ಗೆ 7:00ರಿಂದ ಅಪರಾಹ್ನ 3ರವರೆಗೆ ಉಡುಪಿ ನಗರಕ್ಕೆ ವಾಹನಗಳ ಪ್ರವೇಶ ನಿರ್ಬಂಧ

Update: 2025-11-27 21:13 IST

ಉಡುಪಿ: ಶ್ರೀಕೃಷ್ಣ ಮಠದಲ್ಲಿ ನ.28ರಂದು ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಭಾಗವಹಿಸಲಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಿತವನ್ನು ದೃಷ್ಟಿಯಲ್ಲಿಟ್ಟುಕೊಂಡು ಮುಂಜಾನೆ 7:00ಗಂಟೆಯಿಂದ ಕಾರ್ಯಕ್ರಮ ಮುಗಿಯುವವರೆಗೆ ನಗರದೊಳಗೆ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಆದೇಶ ಹೊರಡಿಸಿದ್ದಾರೆ.

ಕೇಂದ್ರ ಮೋಟಾರು ವಾಹನ ಕಾಯ್ದೆ 1988ರ ನಿಯಮ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಾಮವಳಿಗಳು 1989ರ ನಿಯಮ 221(ಎ)(2)(5) ರನ್ವಯ ನವೆಂಬರ್ 28ರಂದು ಬೆಳಗ್ಗೆ 6 ಗಂಟೆಯಿಂದ ಅಪರಾಹ್ನ 3 ಗಂಟೆಯವರೆಗೆ ಈ ಕೆಳಕಂಡಂತೆ ವಾಹನಗಳ ಸಂಚಾರ ನಿಷೇಧಿಸಿ ಮತ್ತು ಬದಲಿ ಮಾರ್ಗದಲ್ಲಿ ಸಂಚರಿಸುವ ಕುರಿತು ಜಿಲ್ಲಾ ದಂಡಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿಗಳು ಆದೇಶದಲ್ಲಿ ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಬರುವ ವಾಹನಗಳು: ಕುಂದಾಪುರದಿಂದ ಬರುವ ವಾಹನಗಳೆಲ್ಲವನ್ನೂ ನಿಟ್ಟೂರಿನ ಸಿಲಾಸ್ ಶಾಲೆಯ ಪಾರ್ಕಿಂಗ್ ಸ್ಥಳದಲ್ಲಿ ಪಾರ್ಕ್ ಮಾಡಬೇಕು.ಕುಂದಾಪುರದಿಂದ ಬರುವ ವಾಹನಗಳು ಗುಂಡಿಬೈಲು ಹತ್ತಿರ ಜನರನ್ನು ಇಳಿಸಿ ಯು ಟರ್ನ್ ಆಗಿ ಎಂಜಿಎಂ ಮೈದಾನಕ್ಕೆ ಹೋಗಬೇಕು.

ಕಾರ್ಕಳ ಬೆಳ್ವೆ ಮಾರ್ಗವಾಗಿ ಉಡುಪಿಗೆ ಬರುವ ವಾಹನಗಳನ್ನು ಕ್ರಿಶ್ಚಿಯನ್ ಹೈಸ್ಕೂಲ್, ಪಿಯು ಕಾಲೇಜ್ ಮತ್ತು ಬೈಲೂರು ಮುದ್ದಣ ಎಸ್ಟೇಟ್‌ನಲ್ಲಿ ಪಾರ್ಕ್ ಮಾಡಿ ರೋಡ್ ಶೋಗೆ ತೆರಳಬೇಕು.

ಮಂಗಳೂರು ಕಡೆಯಿಂದ ರೋಡ್ ಶೋಗೆ ಬರುವ ವಾಹನಗಳನ್ನು ಬೈಲೂರು ಮುದ್ದಣ್ಣ ಎಸ್ಟೇಟ್‌ನಲ್ಲಿ ಪಾರ್ಕ್ ಮಾಡಬೇಕು. ಮಲ್ಪೆ ಕಡೆಯಿಂದ ರೋಡ್ ಶೋಗೆ ಬರುವ ವಾಹನಗಳನ್ನು ಶ್ಯಾಮಿಲಿ ಎದುರು ಗ್ರೌಂಡ್‌ನಲ್ಲಿ ಪಾರ್ಕ್ ಮಾಡಬೇಕು.

ಕಾರ್ಕಳ ಹೆಬ್ರಿ ಕಡೆಯಿಂದ ಕಾರ್ಯಕ್ರಮಕ್ಕೆ ಬರುವ ವಾಹನಗಳು ಶಾರದಾ ಕಲ್ಯಾಣಮಂಟಪ ಮಾರ್ಗವಾಗಿ ಬೀಡಿನಗುಡ್ಡೆಯಲ್ಲಿ ಪಾರ್ಕ್ ಮಾಡಬೇಕು. ಮಲ್ಪೆ ಕಡೆಯಿಂದ ರೋಡ್ ಶೋಗೆ ಬರುವ ಜನರು ವಾಹನಗಳನ್ನು ವಿವೇಕಾನಂದ ಸ್ಕೂಲ್ ಪಾರ್ಕಿಂಗ್ ಪ್ರದೇಶದಲ್ಲಿ ಪಾರ್ಕ್ ಮಾಡಬೇಕು.

ಬಸ್ಸುಗಳು ಮತ್ತು ಕಾರುಗಳು: ಕೆಎಸ್ಸಾರ್ಟಿಸಿ ಮತ್ತು ಖಾಸಗಿ ಬಸ್‌ಗಳು ಉಡುಪಿ ಬಸ್‌ನಿಲ್ದಾಣದ ಕಡೆಗೆ ಬರುವಂತಿಲ್ಲ. ಅವುಗಳು ನೇರವಾಗಿ ಅಂಬಾಗಿಲು ಮಾರ್ಗವಾಗಿ ಮಣಿಪಾಲ ಅಲೆವೂರು ಮಾರ್ಗವಾಗಿ ಕೊರಂಗ್ರಪಾಡಿ ಮಾರ್ಗವಾಗಿ ಬಲೈಪಾದೆಯಾಗಿ ಚಲಿಸಬೇಕು. ಮಲ್ಪೆಯಿಂದ ಮಂಗಳೂರು ಕಡೆಗೆ ಹೋಗುವ ವಾಹನಗಳು ಪಡುಕೆರೆ, ಪಿತ್ರೋಡಿ, ಉದ್ಯಾವರ ಮಾರ್ಗವಾಗಿ ಚಲಿಸಬೇಕು.

ಮಲ್ಪೆಯಿಂದ ಕುಂದಾಪುರದತ್ತ ಹೋಗುವ ವಾಹನಗಳು ಸಂತೆಕಟ್ಟೆ ಮತ್ತು ನೇಜಾರು ಮೂಲಕ ಸಂಚರಿಸಬೇಕು.

ಮಂಗಳೂರಿನಿಂದ ಕುಂದಾಪುರ ಕಡೆಗೆ: ಕಟಪಾಡಿಯಿಂದ- ಮಣಿಪುರ- ದೆಂದೂರಕಟ್ಟೆ ರಾಂಪುರ- ಅಲೆವೂರು, ಗುಡ್ಡೆ ಅಂಗಡಿ- ಮಣಿಪಾಲ- ಆರ್‌ಎಸ್‌ಬಿ ಸಭಾಭವನ- ಸಿಂಡಿಕೇಟ್ ಸರ್ಕಲ್, ಕಾಯಿನ್ ಸರ್ಕಲ್- ಪೆರಂಪಳ್ಳಿ- ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಅಂಬಾಗಿಲು ಎನ್‌ಎಚ್ 66ರ ಮೂಲಕ ಚಲಿಸಬೇಕು.

ಕಟಪಾಡಿ ಉದ್ಯಾವರ ಕಡೆಯಿಂದ ಬಂದ ವಾಹನಗಳು- ಬಲೈಪಾದೆ- ಗುಡ್ಡೆಅಂಗಡಿ- ಕೊರಂಗ್ರಪಾಡಿ ಕ್ರಾಸ್-ಕೊರಂಗ್ರಪಾಡಿ- ಕುಕ್ಕಿಕಟ್ಟೆ- ಜೋಡುರಸ್ತೆ ಅಲೆವೂರು- ಗುಡ್ಡೆಅಂಗಡಿ- ಮಣಿಪಾಲ-ಆರ್‌ಎಸ್‌ಬಿ ಸಭಾ ಭವನ- ಸಿಂಡಿಕೇಟ್ ಸರ್ಕಲ್- ಕಾಯಿನ್ ಸರ್ಕಲ್- ಪೆರಂಪಳ್ಳಿ- ಅಂಬಾಗಿಲು ಪೆರಂಪಳ್ಳಿ ಕ್ರಾಸ್-ಅಂಬಾಗಿಲು ಎನ್‌ಎಚ್‌66 ಮೂಲಕ ಸಂಚರಿಸಬೇಕು.

ಕುಂದಾಪುರದಿಂದ-ಮಂಗಳೂರು ಕಡೆಗೆ: ಅಂಬಾಗಿಲು ಎನ್ ಹೆಚ್ 66- ಅಂಬಾಗಿಲು ಪೆರಂಪಳ್ಳಿ ಕ್ರಾಸ್- ಪೆರಂಪಳ್ಳಿ- ಕಾಯಿನ್ ಸರ್ಕಲ್- ಸಿಂಡಿಕೇಟ್ ಸರ್ಕಲ್-ಮಣಿಪಾಲ ಆರ್‌ಎಸ್‌ಬಿ ಸಭಾ ಭವನ- ಅಲೆವೂರು ಗುಡ್ಡೆಅಂಗಡಿ- ರಾಂಪುರ- ದೆಂದೂರ್‌ಕಟ್ಟೆ- ಮಣಿಪುರ- ಕಟಪಾಡಿ ಮೂಲಕ ಸಂಚರಿಸಬೇಕು.

ಮಂಗಳೂರಿನಿಂದ ಮಲ್ಪೆ ಕಡೆಗೆ: ಎನ್‌ಎಚ್‌66ರ ಕಿಯಾ ಶೋ ರೂಂ- ಉದ್ಯಾವರ ಜಂಕ್ಷನ್-ಉದ್ಯಾವರ ಪೇಟೆ-ಪಿತ್ರೋಡಿ-ಸಂಪಿಗೆ ನಗರ ಕುತ್ಪಾಡಿ- ಕಡೆಕಾರು- ಕಿದಿಯೂರು-ಮಲ್ಪೆ ಮೂಲಕ ಸಂಚರಿಸಬೇಕು.

ನ.28ರ ಶುಕ್ರವಾರ ಬೆಳಗ್ಗೆ 07:00 ಗಂಟೆಯಿಂದ ಅಪರಾಹ್ನ 3:00 ಗಂಟೆಯವರೆಗೆ ಯಾವುದೇ ವಾಹನಗಳು ಕರಾವಳಿ ಕಡೆಯಿಂದ ಉಡುಪಿ ಸಿಟಿ ಬಸ್ ನಿಲ್ದಾಣ ಮತ್ತು ಉಡುಪಿ ಸಿಟಿ ಕಡೆಗೆ ಬರುವಂತಿಲ್ಲ ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

ಸಾಸ್ತಾನ ಟೋಲ್‌ನಲ್ಲಿ ಉಚಿತ ಪ್ರವೇಶ

ಪ್ರಧಾನಿ ನರೇಂದ್ರ ಮೋದಿ ಉಡುಪಿ ಶ್ರೀಕೃಷ್ಣ ಮಠದ ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರ ವಾಹನಗಳಿಗೆ ಸಾಸ್ತಾನ ಟೋಲ್ ಗೇಟ್‌ನಲ್ಲಿ ಉಚಿತ ಪ್ರವೇಶಕ್ಕೆ ಅನುವು ಮಾಡಲಾಗಿದೆ ಎಂದು ಶಾಸಕ ಯಶ್‌ಪಾಲ್ ಸುವರ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News