ದಿ ನ್ಯೂ ಇಂಗ್ಲಿಷ್ ಪಿಯು ಕಾಲೇಜಿನ 41 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ
ಅಂಕೋಲಾ: ತಾಲೂಕಿನ ಶೆಟಗೇರಿಯ ಸತ್ಯಾಗ್ರಹ ಸ್ಮಾರಕ ಮೈದಾನದಲ್ಲಿ ನಡೆದ ಪಿಯು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಟ್ಕಳ ತಾಲೂಕು ಸತತ 3 ನೇ ಬಾರಿ ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಪಡೆದು ಕೊಂಡಿದ್ದು, ಭಟ್ಕಳದ ದಿ ನ್ಯೂ ಇಂಗ್ಲೀಷ್ ಪಿ ಯು ಕಾಲೇಜಿನ ವಿದ್ಯಾರ್ಥಿಗಳು ತಮ್ಮ ಅತ್ಯುತ್ತಮ ಪ್ರದರ್ಶನ ನೀಡುವುದರ ಮೂಲಕ ಒಟ್ಟು 41 ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಬಾಲಕಿಯರ ವಿಭಾಗದಲ್ಲಿ ದೀಕ್ಷಾ ದೇವಾಡಿಗ 4*400 ಮೀ ರೀಲೆ ಪ್ರಥಮ, ಗುಡ್ಡಗಾಡು ಓಟದಲ್ಲಿ ಪ್ರಥಮ, 800 ಮೀ, 1500 ಮೀ ಮತ್ತು 3000ಮೀ ಓಟದಲ್ಲಿ ದ್ವಿತೀಯ. ಧನ್ಯಾ ಗೊಂಡ 4*400 ಮೀ ರೀಲೆ ಪ್ರಥಮ ಮತ್ತು ಉದ್ದ ಜಿಗಿತ ತ್ರತೀಯ, ಮೋನಿಕ ದೇವಾಡಿಗ 4*400 ಮೀ ರೀಲೆ ಪ್ರಥಮ, 400 ಮೀ ಓಟದಲ್ಲಿ ದ್ವಿತೀಯ. ಬಿಂದುಶ್ರೀ ದೇವಾಡಿಗ 4*400 ಮೀ ರೀಲೆ ಪ್ರಥಮ. ಹಿತಾಶ್ರೀ ಗೊಂಡ ಗುಡ್ಡಗಾಡು ಓಟದಲ್ಲಿ ಪ್ರಥಮ, 400ಮೀ. ಹರ್ಡಲ್ಸ ದ್ವಿತೀಯ, ಮೇಘನಾ ನಾಯ್ಕ ಗುಡ್ಡಗಾಡು ಓಟದಲ್ಲಿ ಪ್ರಥಮ, 3000ಮೀ ಮತ್ತು 1500 ಮೀ ಓಟದಲ್ಲಿ ತ್ರತೀಯ. ಸಿಂಧು ಅರೇರಾ, ಯಶಸ್ವಿನಿ ನಾಯ್ಕ ಮತ್ತು ಗಾಯತ್ರಿ ಮಂಕಿಕರ ಕರಾಟೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಬಾಲಕರ ವಿಭಾಗದಲ್ಲಿ ಜಯಂತ ಮರಾಠಿ 4*400 ಮೀ ರೀಲೆ ಪ್ರಥಮ, ಗುಡ್ಡಗಾಡು ಓಟದಲ್ಲಿ ಪ್ರಥಮ, 400 ಮೀ. ಹರ್ಡಲ್ಸ ಪ್ರಥಮ, 800 ಮೀ ಓಟದಲ್ಲಿ ಪ್ರಥಮ, 1500 ಮೀ ಓಟದಲ್ಲಿ ದ್ವಿತೀಯ. ಹಿತೇಶ ನಾಯ್ಕ 4*400 ಮೀ ರೀಲೆ ಪ್ರಥಮ ಮತ್ತು 4*100 ಮೀ ರೀಲೆ ಪ್ರಥಮ, ಅಕ್ಷಯ ಕೇಲ್ಶಿ 4*400 ಮೀ ರೀಲೆ ಪ್ರಥಮ ಮತ್ತು 4*100 ಮೀ ರೀಲೆ ಪ್ರಥಮ, 400 ಮೀ ಓಟದಲ್ಲಿ ಪ್ರಥಮ. ಸುಜಲ ಗಣಾಚಾರಿ ಗುಡ್ಡಗಾಡು ಓಟದಲ್ಲಿ ಪ್ರಥಮ, ಪ್ರಮೋದ ನಾಯ್ಕ 4*400 ಮೀ ರೀಲೆ ಪ್ರಥಮ, sಶಿವರಾಜ ಮೊಗೇರ 110 ಮೀ. ಹರ್ಡಲ್ಸ ಪ್ರಥಮ, ವಿನೋದ ನಾಯ್ಕ 400 ಮೀ. ಹರ್ಡಲ್ಸ ಮತ್ತು 110 ಮೀ. ಹರ್ಡಲ್ಸ ದ್ವಿತೀಯ. ನವೀನ ನಡಿಗೆಯಲ್ಲಿ ದ್ವಿತೀಯ, ತ್ರಿಶಾಂಕ 4*100 ಮೀ ರೀಲೆ ಪ್ರಥಮ, ಅಂಕಿತ ನಾಯ್ಕರ ಚೆಸ ನಲ್ಲಿ ಪ್ರಥಮ, ಫ್ರಾನ್ಸಿಸ ಲೂಯಿಸ ಮತ್ತು ವಿಜೇತ ನಾಯ್ಕ ಕರಾಟೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.
ಬಾಲಕಿಯರ ವಿಭಾಗದ ಗುಂಪು ಆಟಗಳಾದ ಕಬಡ್ಡಿ ಮತ್ತು ಖೋ-ಖೋ ಪ್ರಥಮ, ಹಾಗೂ ವಾಲಿಬಾಲ ನಲ್ಲಿ ದ್ವಿತೀಯ ಸ್ಥಾನ ಹಾಗೆಯೇ ಬಾಲಕರ ವಿಭಾಗದ ಗುಂಪು ಆಟ ಬಾಲ ಬೆಡ್ಮಿಂಟನ ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿರುತ್ತಾರೆ.
ಕ್ರೀಡೆಯಲ್ಲಿ ಉತ್ತಮ ಸಾಧನೆ ತೋರಿದ ಎಲ್ಲಾ ವಿದ್ಯಾರ್ಥಿಗಳಿಗೆ ಭಟ್ಕಳ ಎಜ್ಯುಕೇಶನ ಟ್ರಸ್ಟಿನ ಅಧ್ಯಕ್ಷರಾದ ಡಾ. ಸುರೇಶ ವಿ. ನಾಯಕ, ಮ್ಯಾನೇಜಿಂಗ್ ಟ್ರಸ್ಟಿಯವರಾದ ಶ್ರೀ ಆರ್, ಜಿ, ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ಶ್ರೀ ರಾಜೇಶ ನಾಯಕ, ಪ್ರಾಂಶುಪಾಲರಾದ ಡಾ. ವಿರೇಂದ್ರ ವಿ. ಶಾನಬಾಗ, ದೈಹಿಕ ಶಿಕ್ಷಣ ನಿರ್ದೇಶಕ ಕೃಷ್ಣಪ್ಪ ನಾಯ್ಕ ಹಾಗೂ ಬೋಧಕ- ಬೋಧಕೇತರ ಸಿಬ್ಬಂದಿ ಅಭಿನಂದಿಸಿರುತ್ತಾರೆ.