×
Ad

ಭಟ್ಕಳ: ಆನಂದಾಶ್ರಮ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Update: 2025-12-04 14:38 IST

ಭಟ್ಕಳ: ನಗರದ ಶಿಕ್ಷಣ ಸಂಸ್ಥೆ ಆನಂದಾಶ್ರಮ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಾರ್ಷಿಕ ಕ್ರೀಡಾಕೂಟ ಬುಧವಾರ ನಡೆಯಿತು.

ಶಾಲಾ ಕ್ರೀಡಾ ಕೂಟದ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಶಾಲಾ ಸಂಚಾಲಕಿ ಸಿಸ್ಟರ್ ಲೂಸಿ ಡಿಸೋಜ ಅವರು ಶಾಲಾ ಪಠ್ಯಕ್ರಮದೊಂದಿಗೆ ಕ್ರೀಡೆಯ ಅವಶ್ಯಕತೆಯನ್ನು ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಜ್ಲಿಸೆ ಇಸ್ಲಾ-ವ-ತಂಝೀಂ ಅಧ್ಯಕ್ಷ ಇನಾಯತ್‌ವುಲ್ಲಾ ಶಾಬಂದ್ರಿ, ರಾಷ್ಟ್ರ ಮಟ್ಟದ ಕಬ್ಬಡ್ಡಿ ಆಟಗಾರ ಶ್ರೀಧರ ನಾಯ್ಕ, ಪಾಲಕ ಬೋಧಕ ಸಮಿತಿ ಉಪಾಧ್ಯಕ್ಷ ಜಯರಾಂ ಹೊಸ್ಕಟ್ಟಾ, ಶಾಲಾ ಮುಖ್ಯೋಪಾಧ್ಯಾಯಿನಿ ಸಿಸ್ಟರ್ ಲವಿನಾ ಜ್ಯೋತಿ ಡಿಸೋಜ, ಜೋಯ ಲ್ಯಾಂಡ್ ಪ್ಲೇ ಹೋಮ್‌ನ ಸಿಸ್ಟರ್ ಐರಿನ್ ಮಥಾಯಿಸ್, ಆನಂದ ಆಶ್ರಮ ಕಾನ್ವೆಂಟ್ ಸುಪೀರಿಯರ್ ಸಿಸ್ಟರ್ ಅನಿತಾ ಪಿಂಟೊ ಉಪಸ್ಥಿತರಿದ್ದರು.

ಉದ್ಘಾಟನಾ ಕಾರ್ಯಕ್ರಮಕ್ಕೂ ಪೂರ್ವ ಶಾಲೆಯ ನಾಲ್ಕು ತಂಡಗಳು ಶಿಸ್ತು ಬದ್ಧವಾದ ಕವಾಯತ್ತು ಮತ್ತು ಸುಂದರವಾದ, ಅಚ್ಚುಕಟ್ಟಾದ ತಂಡ ಚಟುವಟಿಕೆ ಮತ್ತು ಆಟೋಟಗಳನ್ನು ಪ್ರದರ್ಶಿಸಿದರು. ಆಟೋಟ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಫಲಕ, ಪ್ರಮಾಣ ಪತ್ರವನ್ನು ವಿತರಿಸಲಾಯಿತು.

ಬಾಲಕಿಯರ ವಿಭಾಗದ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ಕುಮಾರಿ ಗಾನವಿ. ಜಿ. ಖಾರ್ವಿ, ಬಾಲಕರ ವಿಭಾಗದ ವೈಯಕ್ತಿಕ ವೀರಾಗ್ರಣಿ ಪ್ರಶಸ್ತಿಯನ್ನು ಕುಮಾರ ಜಾಕ್ಸನ್ ಡಿಸೋಜಾ ಪಡೆದುಕೊಂಡರು. ಸಮಗ್ರ ವೀರಾಗ್ರಣಿ ಪ್ರಶಸ್ತಿಯನ್ನು ಫಾರ್‌ಗೀವ್‌ನೆಸ್ ತಂಡ ಪಡೆಯಿತು. ಕರ‍್ಯಕ್ರಮದಲ್ಲಿ ಪಾಲಕ-ಭೋದಕ ಸಮಿತಿಯ ಸದಸ್ಯರು, ಶಿಕ್ಷಕರು, ಪ್ರೌಢಶಾಲಾ ವಿಭಾಗದ ಶಿಕ್ಷಕರು ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News