×
Ad

ಭಟ್ಕಳ: ಕೆ.ಡಿ.ಪಿ. ಸಭೆ; ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ

Update: 2025-05-13 21:52 IST

ಭಟ್ಕಳ: ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ಎಸ್. ವೈದ್ಯ ಅವರ ಅಧ್ಯಕ್ಷತೆಯಲ್ಲಿ ತಾಲೂಕು ಮಟ್ಟದ ತ್ರೈಮಾಸಿಕ ಕೆ.ಡಿ.ಪಿ. ಸಭೆ ಮಂಗಳವಾರ ನಡೆಯಿತು. ಸಭೆಯಲ್ಲಿ ಆರೋಗ್ಯ, ಶಿಕ್ಷಣ, ತೋಟಗಾರಿಕೆ, ಪಶುಸಂಗೋಪನೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಲಾಯಿತು.

ಆಸ್ಪತ್ರೆಯಲ್ಲಿ ರಾಜಕಾರಣ ನಡೆಯಬಾರದು ಎಂದು ಖಡಕ್ ಎಚ್ಚರಿಕೆ ನೀಡಿದ ಸಚಿವರು, ರೋಗಿಗಳಿಗೆ ಉತ್ತಮ ಚಿಕಿತ್ಸೆ ಮತ್ತು ಔಷಧೋಪಚಾರ ಒದಗಿಸಬೇಕು ಎಂದು ತಿಳಿಸಿದರು. ಭಟ್ಕಳದಲ್ಲಿ 50 ಲಕ್ಷ ರೂ. ಅನುದಾನದಿಂದ ಪಶು ಕಚೇರಿ ನಿರ್ಮಾಣ ಆಗಲಿದ್ದು, ಎರಡು ಗೋಶಾಲೆಗಳಿಗೆ ಶಾಶ್ವತ ಹಣ ಸಹ ಒದಗಿಸಲಾಗಿದೆ. ಹೈನುಗಾರಿಕೆಗೆ ಪ್ರೋತ್ಸಾಹವಾಗಿ ಸರ್ಕಾರ ಪರಿಹಾರ ನೀಡುತ್ತಿದೆ ಎಂದು ತಿಳಿಸಿದರು.

ತಾಲೂಕಿನಲ್ಲಿ ಮಳೆ ಮಾಪನ ಕಾರ್ಯ ಸ್ಥಗಿತಗೊಂಡಿದ್ದು, 10 ದಿನಗಳಲ್ಲಿ ದುರಸ್ತಿಪಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.ಎಸ್.ಎಸ್.ಎಲ್.ಸಿ.ಯಲ್ಲಿ ಭಟ್ಕಳದ ಸರಕಾರಿ ಶಾಲೆಗಳಲ್ಲಿ ಉತ್ತಮ ಫಲಿತಾಂಶ ಬಂದಿದ್ದು, ಶೇ.88ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಉತ್ತಮ ಅಂಕ ಪಡೆದ ಮಕ್ಕಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಲಾಯಿತು. ಬಾಡಿಗೆ ಕಟ್ಟಡದ ಶಾಲೆಗೆ ಸ್ವಂತ ಕಟ್ಟಡ ನಿರ್ಮಿಸಲು ಸೂಚನೆ ನೀಡಿದರು.

ಬಸ್ ಸೇವೆಯಲ್ಲಿ ಸಮಸ್ಯೆ ಇರುವುದನ್ನು ಪ್ರಶ್ನಿಸಿದ ಸಚಿವರು, ಸಂಜೆ 8 ಗಂಟೆಗೆ ಭಟ್ಕಳ ಹಾಗೂ ಹೊನ್ನಾವರದಿಂದ ಬಸ್ ಹಮ್ಮಿಕೊಳ್ಳಲು ಸೂಚಿಸಿದರು. ಜಾಲಿಯ ಐಟಿಐ ಮತ್ತು ಡಿಗ್ರಿ ಕಾಲೇಜುಗಳಿಗೆ ಬಸ್ ವ್ಯವಸ್ಥೆ ಮಾಡಬೇಕೆಂದು ತೋಟಗಾರಿಕೆ ಜಾಗದ ಪರಿಶೀಲನೆಗೆ ಸೂಚನೆ, ಹಳೆ ಅತಿಕ್ರಮಣದಾ ರರಿಗೆ ತೊಂದರೆ ನೀಡಬಾರದು ಎಂದರು. ಆಟೋ ಚಾಲಕರಿಗೆ ಕಾರ್ಡ್ ನೀಡಲು ಹಾಗೂ ಮಹಿಳಾ ಹಾಸ್ಟೆಲ್‌ಗೆ ಸಿಬ್ಬಂದಿ ನೇಮಕಕ್ಕೆ ಸೂಚನೆ ನೀಡಿದರು. ಪೊಲಿಸ್ ಇಲಾಖೆಯೊಂದಿಗೆ ಜಂಟಿ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ನಿಕೋಟಿನ್ ಪರೀಕ್ಷಾ ಕೇಂದ್ರ ಭಟ್ಕಳದಲ್ಲಿ ಸ್ಥಾಪಿಸಲು ಮನವಿ ಒಪ್ಪಿಕೊಂಡರು.

ಮುರಡೇಶ್ವರ ಬಂದರು 400 ಕೋಟಿ ರೂ. ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಡ್ರೋನ್ ಸರ್ವೇ ಪ್ರಗತಿ ಪರಿಶೀಲಿಸಿ, ನಗರ ಪ್ರದೇಶದಲ್ಲಿ ತ್ವರಿತವಾಗಿ ಕಾರ್ಯಪಾಲಿಸಬೇಕು ಎಂದರು. ನ್ಯಾಯಬೆಲೆ ಅಂಗಡಿ ಗಳಿಗೆ ಭೇಟಿ ನೀಡಿ ಅಕ್ಕಿ ವಿತರಣೆಯ ಸಮರ್ಪಕತೆ ಖಚಿತಪಡಿಸಬೇಕು. ಕಂದಾಯ ಇಲಾಖೆ ಪತ್ರಗಳನ್ನು ವಿಳಂಬಗೊಳಿಸದೆ ಇತ್ಯರ್ಥಪಡಿಸಬೇಕು ಎಂದು ಸೂಚಿಸಿದರು.

ಸಭೆಯಲ್ಲಿ 2023-24 ನೇ ಸಾಲಿನ ಎಸ್.ಎಸ್.ಎಲ್.ಸಿ. ಟಾಪ್ ೩ ವಿದ್ಯಾರ್ಥಿಗಳಿಗೆ ಲ್ಯಾಪ್ಟಾಪ್ ವಿತರಣೆ ಮಾಡಲಾಯಿತು. ವಿವಿಧ ಇಲಾಖೆಗಳ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನೆ ನಡೆಸಿ, ಜನ ಸಾಮಾನ್ಯರ ಸಮಸ್ಯೆಗಳಿಗೆ ತ್ವರಿತ ಪರಿಹಾರ ನೀಡಲು ಸಚಿವರು ಸೂಚನೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News