×
Ad

ಭಟ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ: ಮೋಹನ ನಾಯ್ಕ ಅಧ್ಯಕ್ಷ

Update: 2025-12-23 19:33 IST

ಭಟ್ಕಳ: ತಾಲೂಕಿನ ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಂಗಸಂಸ್ಥೆಯಾದ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಅಧ್ಯಕ್ಷರಾಗಿ ಪ್ರಜಾವಾಣಿ ವರದಿಗಾರ ಮೋಹನ ನಾಯ್ಕ ಅವರು ಅವಿರೋಧವಾಗಿ ಆಯ್ಕೆಯಾದರು. ಕಾರ್ಯದರ್ಶಿಯಾಗಿ ಶೈಲೇಶ ವೈದ್ಯ ಅವರು ಪುನರಾಯ್ಕೆಯಾಗಿದ್ದಾರೆ.

ಸೋಮವಾರ ಸಂಜೆ ನಡೆದ ಸಂಘದ ಮುಂದಿನ ಮೂರು ವರ್ಷಗಳ ಪದಾಧಿಕಾರಿಗಳ ಚುನಾವಣೆಯನ್ನು ಹಿರಿಯ ಪತ್ರಕರ್ತ ಹಾಗೂ ಸಂಘದ ಮಾಜಿ ಅಧ್ಯಕ್ಷ ಸತೀಶ ಕುಮಾರ್ ಅವರ ನೇತೃತ್ವದಲ್ಲಿ ನಡೆಸಲಾಯಿತು. ಅಧ್ಯಕ್ಷ ಹಾಗೂ ಕಾರ್ಯದರ್ಶಿ ಸ್ಥಾನಗಳಿಗೆ ತಲಾ ಒಂದೇ ಹೆಸರು ಸೂಚನೆಯಾಗಿದ್ದರಿಂದ ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಚುನಾವಣೆಯಲ್ಲಿ ಉಪಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ಅತೀಕುರ್ ರಹಮಾನ್ ಶಾಬಂದ್ರಿ, ಖಜಾಂಚಿಯಾಗಿ ಫಯಾಜ್ ಮುಲ್ಲಾ ಅವರು ಆಯ್ಕೆಯಾದರು. ಸಂಘದ ಗೌರವಾಧ್ಯಕ್ಷರಾಗಿ ವಾರ್ತಾಭಾರತಿ ಹಿರಿಯ ವರದಿಗಾರ ನಿಕಟಪೂರ್ವ ಅಧ್ಯಕ್ಷ ಎಂ.ಆರ್. ಮಾನ್ವಿ ಅವರನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಮಾಜಿ ಅಧ್ಯಕ್ಷ ರಾಧಾಕೃಷ್ಣ ಭಟ್ಟ, ಮಾಜಿ ಅಧ್ಯಕ್ಷರಾದ ರಾಘವೇಂದ್ರ ಹೆಬ್ಬಾರ್, ಭಾಸ್ಕರ ನಾಯ್ಕ, ಮನಮೋಹನ ನಾಯ್ಕ, ಇನಾಯತ್‌ಉಲ್ಲಾ ಗವಾಯಿ, ವಿಷ್ಣು ದೇವಡಿಗ, ರಿಜ್ವಾನ್ ಗಂಗಾವಳಿ, ಅಝರ್ ಬರ್ಮಾವರ್, ಪ್ರಸನ್ನ ಭಟ್ಟ, ಲೋಕೇಶ ನಾಯ್ಕ, ಈಶ್ವರ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News