ವಿಜಯನಗರ | ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಕ್ಕಳಿಗಾಗಿ ಅರಿವು, ಜಾಗೃತಿ ಕಾರ್ಯಕ್ರಮ
Update: 2025-11-24 20:20 IST
ವಿಜಯನಗರ /ಹೊಸಪೇಟೆ : ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ತೆರೆದ ಮನೆ ಕಾರ್ಯಕ್ರಮವನ್ನು ಆಯೋಜಿಸಿ, ಶಾಲಾ ಮಕ್ಕಳಿಗೆ 112 ತುರ್ತು ಸಹಾಯವಾಣಿ,1930 ಸೈಬರ್ ಅಪರಾಧ ಸಹಾಯವಾಣಿ, ಬಾಲ್ಯ ವಿವಾಹ ನಿಷೇಧ ಕಾಯ್ದೆ, ಪೋಕ್ಸೋ ಕಾಯ್ದೆ ಹಾಗೂ ಸಂಚಾರ ನಿಯಮಗಳು ಮತ್ತು ಠಾಣೆಯ ಕಾರ್ಯವೈಖರಿಯ ಕುರಿತು ಅರಿವು ಮತ್ತು ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಠಾಣಾಧಿಕಾರಿ ಸೇರಿದಂತೆ ಪೊಲೀಸ್ ಸಿಬ್ಬಂದಿಗಳು ಭಾಗವಹಿಸಿದ್ದರು.