×
Ad

ಹೊಸಪೇಟೆ ಕೇಂದ್ರ ಬಸ್ ನಿಲ್ದಾಣಕ್ಕೆ ಡಿಸಿ ದಿಢೀರ್ ಭೇಟಿ

Update: 2025-06-27 22:18 IST

ಹೊಸಪೇಟೆ (ವಿಜಯನಗರ) : ಸರಕಾರದ ಯೋಜನೆಗಳು ಮತ್ತು ಸಾಧನೆಗಳನ್ನು ಬಿಂಬಿಸುವ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಲು ಆಗಮಿಸಿದ್ದ ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಕೇಂದ್ರ ಬಸ್ ನಿಲ್ದಾಣದ ಆವರಣದಲ್ಲಿ ಪರಿಶೀಲನೆ ನಡೆಸಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಬಳಿಕ ಮಾರಾಟ ಮಳಿಗೆಗಳಲ್ಲಿನ ಸಿಹಿ ತಿನಿಸುಗಳು, ಕುಡಿಯುವ ನೀರಿನ ಬಾಟಲ್, ಪ್ಯಾಕಿಂಗ್ ತಿನಿಸುಗಳ ಕವರ್ ಮೇಲಿನ ವ್ಯಾಲಿಡಿಟಿ ಪರಿಶೀಲಿಸಿ ಮಾರಾಟಗಾರರಿಗೆ ಕೆಲವು ಸಲಹೆಗಳನ್ನು ನೀಡಿದರು. ನಿಲ್ದಾಣದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ವೀಕ್ಷಿಸಿ ಡಿಟಿಓ ರಾಜಶೇಖರ್ ವಾಜಂತ್ರಿರಿಗೆ ಒಂದು ಗ್ಲಾಸ್ ನೀರು ಕುಡಿಸಿದರು. ಘಟಕದಲ್ಲಿ ಮುದ್ರಿಸಿದ್ದ 1 ಲೀಟರ್ ನೀರಿಗೆ ರೂ.2 ನಾಮಫಲಕವನ್ನು ತೆರವುಗೊಳಿಸಿ, ಉಚಿತ ಕುಡಿಯುವ ನೀರು ನೀಡುವಂತೆ ಸೂಚಿಸಿದರು.

ಈ ವೇಳೆ ಹುಡಾ ಅಧ್ಯಕ್ಷ ಇಮಾಮ್ ನಿಯಾಜಿ, ವಾರ್ತಾಧಿಕಾರಿ ಧನಂಜಯಪ್ಪ ಬಿ. ಸೇರಿದಂತೆ ಕೆಕೆಎಸ್‌ಆರ್‌ಟಿಸಿ ಸಿಬ್ಬಂದಿಗಳು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News