×
Ad

ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ಹೋಳಿ ಸಂಭ್ರಮ

Update: 2026-03-04 20:27 IST

ವಿಜಯನಗರ/ಹೊಸಪೇಟೆ : ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಮಾಜ ಸೇವಕ ಎಚ್.ಜೆ.ವಿರೂಪಾಕ್ಷ ಅವರ ನೇತೃತ್ವದಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಸಾವಿರಾರು ಜನರು ಭಾಗವಹಿಸಿ ಬಣ್ಣಗಳ ಹಬ್ಬವನ್ನು ಉತ್ಸಾಹಭರಿತವಾಗಿ ಸಂಭ್ರಮಿಸಿದರು. ಹಬ್ಬದ ಅಂಗವಾಗಿ ಅಗ್ನಿಶಾಮಕ ದಳದ ಸಿಬ್ಬಂದಿ ವಿಶೇಷ ನೀರಿನ ವ್ಯವಸ್ಥೆ ಕಲ್ಪಿಸಿ, ಮೇಲ್ಮೈಯಿಂದ ವಿವಿಧ ರೀತಿಯಲ್ಲಿ ನೀರನ್ನು ಸಿಂಪಡಿಸುವ ಮೂಲಕ ಸಂಭ್ರಮಕ್ಕೆ ಮತ್ತಷ್ಟು ರಂಗು ತುಂಬಿದರು. ಮಕ್ಕಳು ಹಾಗೂ ಯುವಕರು ಡಿಜೆ ಸಂಗೀತಕ್ಕೆ ಕುಣಿದು ಕುಪ್ಪಳಿಸಿ ಹಬ್ಬದ ಉಲ್ಲಾಸವನ್ನು ದ್ವಿಗುಣಗೊಳಿಸಿದರು.

ಶಾಸಕರಾದ ಎಚ್.ಆರ್. ಗವಿಯಪ್ಪ ಅವರ ಹಿರಿಯ ಪುತ್ರರಾದ ಎಚ್.ಜಿ. ಗುರುದತ್ ಹಾಗೂ ಎಚ್.ಜಿ. ವಿರೂಪಾಕ್ಷ ಅವರ ನೇತೃತ್ವದಲ್ಲಿ, “ರಾಹುಲ್ ಡಿಟು” ಅವರ ಸಂಯೋಜನೆಯೊಂದಿಗೆ ವೇದಿಕೆ ಕಾರ್ಯಕ್ರಮಗಳು ನಡೆದವು. 

ಹಬ್ಬದ ಸಂದರ್ಭದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದ್ದು, ಮಹಿಳೆಯರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಾಯಿತು. ಜಿಲ್ಲಾ ಪೊಲೀಸ್ ಇಲಾಖೆ ವತಿಯಿಂದ ಎಸ್‌ಪಿ ಜಾಹ್ನವಿ ಎಸ್ ಅವರ ನೇತೃತ್ವದಲ್ಲಿ ಬಿಗಿ ಬಂದೋಬಸ್ತು ಕೈಗೊಳ್ಳಲಾಗಿದ್ದು, ಯಾವುದೇ ಅಹಿತಕರ ಘಟನೆಗಳಿಲ್ಲದೆ ಹಬ್ಬ ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮದ ಸಮರ್ಪಕ ವ್ಯವಸ್ಥೆ, ಶಿಸ್ತು ಮತ್ತು ಸಾರ್ವಜನಿಕರ ಅನುಕೂಲತೆಗೆ ಕೈಗೊಂಡ ಕ್ರಮಗಳಿಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದರು. ಶಾಸಕರ ಕುಟುಂಬದ ಸರಳ ನಡೆ-ನುಡಿ ಹಾಗೂ ಸಂಘಟನೆಯ ಶ್ರದ್ಧಾ ಕಾರ್ಯವನ್ನು ಸ್ಥಳೀಯರು ಶ್ಲಾಘಿಸಿದರು.

ಒಟ್ಟಿನಲ್ಲಿ, ಹೊಸಪೇಟೆ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಹೋಳಿ ಸಂಭ್ರಮವು ಬಣ್ಣಗಳ ಜೊತೆಗೂಡಿ ಸಹೋದರತ್ವದ ಸಂದೇಶ ಸಾರಿದ ವಿಶಿಷ್ಟ ಉತ್ಸವವಾಗಿ ಉಳಿಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News