ಹರಪನಹಳ್ಳಿ | ಭಾರತೀಯ ಕಮ್ಯುನಿಸ್ಟ್ ಪಕ್ಷದ 5ನೇ ವರ್ಷದ ಶಾಖೆ ಸಮ್ಮೇಳನ
ಹರಪನಹಳ್ಳಿ :ತಾಲ್ಲೂಕಿನ ಅರಸೀಕೆರೆ ಸಮೀಪದ ಕೆರೆಗುಡಿಹಳ್ಳಿಯಲ್ಲಿ ಭಾರತೀಯ ಕಮ್ಯುನಿಸ್ಟ್ ಪಕ್ಷದ 5ನೇ ವರ್ಷದ ಶಾಖೆ ಸಮ್ಮೇಳನವನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪಕ್ಷದ ನಿಕಟ ಪೂರ್ವ ಕಾರ್ಯದರ್ಶಿ ಕಾಂ ಗುಡಿಹಳ್ಳಿ ಹಾಲೇಶ್ ಅವರು, ಸರ್ಕಾರದಿಂದ ಬರುವ ಎಲ್ಲಾ ಸವಲತ್ತುಗಳನ್ನು ಪಂಚಾಯತ್‌ಗಳಿಗೆ ತಲುಪಿಸುವ ಕೆಲಸ ಮಾಡಬೇಕಾಗಿದೆ. ನಮ್ಮ ಪಕ್ಷದ ಬೆಂಬಲದಿಂದ ಗೆದ್ದು ಬಳಿಕ ಪಕ್ಷದ ಸಿದ್ದಂತಗಳನ್ನು ಮರೆತು ಬಿಡುತ್ತಾರೆ. ಆದರೆ ನಾನು ಈ ಹಿಂದೆ ಗೆದ್ದಾಗ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ರೈತರಿಗೆ, ಕಾರ್ಮಿಕರಿಗೆ, ಜನ ಸಾಮಾನ್ಯರಿಗೆ, ಮತ್ತು ಹಿಂದುಳಿದ ವರ್ಗದವರಿಗೆ ಬರುವ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಫಲನುಭವಿಗಳಿಗೆ ತಲುಪುವ ಕೆಲಸ ಮಾಡಿದ್ದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಭಾರತೀಯ ಕಮ್ಯುನಿಸ್ಟ್ ಪಕ್ಷದ ಕೆರೆಗುಡಿಹಳ್ಳಿ 5ನೇ ಶಾಖಾ ಸಮ್ಮೇಳನಕ್ಕೆ ರಾಷ್ಟ್ರೀಯ ಮಹಿಳಾ ಸಂಘಟನೆ ಸದಸ್ಯೆ ದೇವಿಕಾ ಅವರು ಬಾವುಟ ತೋರಿಸುವುದರ ಮೂಲಕ ಚಾಲನೆ ನೀಡಿದರು. ಪಕ್ಷದ ಧ್ವಜಾರೋಹಣವನ್ನು ಸಿಪಿಐ ಹಿರಿಯ ನಾಯಕ ಹಾಗೂ ನಿವೃತ್ತ ಕೆಎಸ್‌ಆರ್‌ಟಿಸಿ ನೌಕರ ಕಾಂ. ಎ.ಕಾಡಪ್ಪ ಅವರು ನೆರವೇರಿಸಿದರು.
ಸಿಪಿಐ ತಾಲ್ಲೂಕು ಕಾರ್ಯದರ್ಶಿ ಕಾಂ ಸಂತೋಷ್, ಸಿಪಿಐ ತಾಲ್ಲೂಕು ಘಟಕದ ಸಹ ಕಾರ್ಯದರ್ಶಿ ಬಾಳಿಗನೂರು ಕೊಟ್ರೇಶ್ ಮಾತನಾಡಿದರು.
ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರಾದ ವೀರಯ್ಯ, ನೀಲಾವಂಜಿ ಮಂಜುನಾಥ್, ಅಂಗನವಾಡಿ ಸಂಘಟನೆ ಅಧ್ಯಕ್ಷೆ ಕಾಂ. ಬಸಮ್ಮ. ಅಂಗನವಾಡಿ ಶಿಕ್ಷಕಿ ಬಿ.ದುರುಗಮ್ಮ, ಎನ್.ಮಲ್ಲೇಶಪ್ಪ, ಅರಕೇರಿ ದುರುಗಪ್ಪ, ಧರ್ಮಸ್ಥಳ ಸಂಘದ ಕರಿಬಸಮ್ಮ, ವಿದ್ಯಾರ್ಥಿ ಸಂಘಟನೆಯ ಕಾರ್ಯದರ್ಶಿ ಅರುಣ ಕುಮಾರ್, ಯು. ಎಂ ವೀರಯ್ಯ. ಭೋವಿ ಈರಮ್ಮ, ಮರುಳಸಿದ್ದಪ್ಪ,ಡಿ. ಬಸವರಾಜ್, ಗಂಗಾವಳ ಬಸವರಾಜ್, ಮಹಿಳೆಯರು ಸೇರಿದಂತೆ ಊರಿನ ಗ್ರಾಮಸ್ಥರು ಹಾಜರಿದ್ದರು.