ಹರಪನಹಳ್ಳಿ| ಭಾಗ್ಯದ ಬಳೇಗಾರ ಖ್ಯಾತಿಯ ಗುಡಿಹಳ್ಳಿ ಮೂಲೆಮನಿ ಬಸವರಾಜಪ್ಪ ನಿಧನ
Update: 2025-11-26 13:40 IST
ವಿಜಯನಗರ: ಹರಪನಹಳ್ಳಿ ತಾಲ್ಲೂಕಿನ ಕೆರೆಗುಡಿಹಳ್ಳಿ ಗ್ರಾಮದ ಮೂಲೆಮನಿ ಬಸವರಾಜಪ್ಪ (72) ಅವರು ಬುಧವಾರ ನಿಧನರಾದರು.
ಮೂಲೆಮನಿ ಬಸವರಾಜಪ್ಪ ಅವರು ಮೂಲ ಬಳೆ ಮಾರುವ ಕೆಲಸದಲ್ಲಿ ನಿರತರಾಗಿದ್ದರು. ಇವರು ಸುತ್ತಳ್ಳಿಯ ಭಾಗ್ಯದ ಬಳೇಗಾರ ಎಂದೇ ಪ್ರಸಿದ್ದಿ ಪಡೆದಿದ್ದರು.
ಮೃತರು ಪತ್ನಿ ಹಾಗೂ ಒಬ್ಬ ಪುತ್ರ, ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ನಾಳೆ ಸ್ವಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.