×
Ad

ಹರಪನಹಳ್ಳಿ | ಎತ್ತು ತಿವಿದು ರೈತ ಮೃತ್ಯು

Update: 2026-01-30 16:27 IST

ಬಿ.ಪಂಚಪ್ಪ

ವಿಜಯನಗರ (ಹರಪನಹಳ್ಳಿ) : ಹೋಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಎತ್ತು ತಿವಿದು ಗಂಭೀರವಾಗಿ ಗಾಯಗೊಂಡ ರೈತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ತಾಲ್ಲೂಕಿನ ಆಲದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮೃತ ರೈತನನ್ನು ಬಿ.ಪಂಚಪ್ಪ (65) ಎಂದು ಗುರುತಿಸಲಾಗಿದೆ.

ರೈತ ಪಂಚಪ್ಪ ಅವರು ಎಂದಿನಂತೆ ಎತ್ತುಗಳೊಂದಿಗೆ ಹೋಲದಲ್ಲಿ ಕೃಷಿ ಕೆಲಸದಲ್ಲಿ ನಿರತರಾಗಿದ್ದ ವೇಳೆ, ಏಕಾಏಕಿ ಎತ್ತು ಕೊಂಬಿನಿಂದ ಅವರ ಪಕ್ಕಕ್ಕೆ ತಿವಿದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡ ಪಂಚಪ್ಪ ಸ್ಥಳದಲ್ಲೇ ಮೂರ್ಚೆ ಹೋಗಿದ್ದಾರೆ. ಘಟನೆ ಬಳಿಕ ಅಲ್ಲೇ ಇದ್ದ ಅವರ ಪುತ್ರ ಬಿ. ಕೊಟ್ರೇಶ ಅವರು ತಕ್ಷಣವೇ ಗಾಯಾಳು ತಂದೆಯನ್ನು ಮತ್ತಿಹಳ್ಳಿ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗೆ ಹರಪನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೆ ರೈತ ಪಂಚಪ್ಪ ಮೃತಪಟ್ಟಿದ್ದಾರೆ ಎಂದು ತಿಳಿದು ಬMದಿದೆ.

ಈ ಕುರಿತು ಚಿಗಟೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News