×
Ad

ಹೊಸಪೇಟೆಯಲ್ಲಿ ಮುಸ್ಲಿಮರಿಂದ ಸಂಭ್ರಮ, ಸಡಗರದ ಈದುಲ್‌ ಫಿತರ್ ಆಚರಣೆ

Update: 2024-04-11 18:02 IST

ಹೊಸಪೇಟೆ : ಈದುಲ್‌ ಫಿತರ್ ಹಬ್ಬವನ್ನು ಹೊಸಪೇಟೆಯಲ್ಲಿ ಮುಸ್ಲಿಂ ಸಮುದಾಯದ ಜನರು ಗುರುವಾರ ಅತ್ಯಂತ ಸಂಭ್ರಮ, ಸಡಗರದಿಂದ ಆಚರಿಸಿದರು. 

ನಗರದ ವಿವಿದ ಈದ್ಗಾ ಮೈದಾನಗಳಾದ ಆರ್.ಟಿ.ಒ ಆಫೀಸ್ ಈದ್ಗಾ ಮೈದಾನದಲ್ಲಿ ಹಾಗೂ ಬಸ್ ಡಿಪೋ ಈದ್ಗಾ ಮೈದಾನ, ಕಾರಿಗನೂರು ಈದ್ಗಾ ಮೈದಾನ, ಟಿ. ಬಿ ಡ್ಯಾಂ ಈದ್ಗಾ ಮೈದಾನ್ ಹಾಗೂ ವಿಶೇಷವಾಗಿ ಅಂಬೇಡ್ಕರ್ ವೃತ್ತದ ಬಳಿ ಇರುವ ಗುಲಾಬ್ ಶಾ ವಲಿ ದರ್ಗಾದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯದ ಜನರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. 

ಅಂಬೇಡ್ಕರ್ ವೃತ್ತದ ಬಳಿ ಇರುವ ಗುಲಾಬ್ ಶಾ ವಲಿ ದರ್ಗಾದ ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮ ಗುರುಗಳಾದ ಹಾಫಿಝ್ ಅಬ್ದುಲ್ ಸಮದ್ ರವರು ನಮಾಝ್  ನೆರವೇರಿಸಿ ಕೊಟ್ಟರು. ನಂತರ ಅಂಜುಮನ್ ಖಿದ್ಮತೆ ಇಸ್ಲಾಂ ಕಮಿಟಿ ಅಧ್ಯಕ್ಷರಾದ ಎಚ್.ಎನ್. ಮುಹಮ್ಮದ ಇಮಾಮ್ ನಿಯಾಝಿ ಅವರು ಪ್ರಾರ್ಥನಾ ಸ್ಥಳದಲ್ಲಿ ಉಪಸ್ಥಿತರಿದ್ದ ಇತರೆ ಸಮಾಜದ ಮುಖಂಡರುಗಳಿಗೆ ಖರ್ಜೂರ ಹಾಗೂ ಶರಬತ್ ನೀಡಿ ಪರಸ್ಪರ ಆಲಿಂಗಿಸಿಕೊಳ್ಳುವ ಮೂಲಕ ಸೌಹಾರ್ದತೆ ಮೆರೆದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News