×
Ad

ಹೊಸಪೇಟೆ | ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಹೊತ್ತಿ ಉರಿದ ಎಸ್‌ಬಿಐ ಎಟಿಎಂ

Update: 2025-02-28 10:45 IST

ಹೊಸಪೇಟೆ : ನಗರದ ಕಾಲೇಜು ರಸ್ತೆ ಬಳಿಯಿರುವ ಎಸ್‌ಬಿಐ ಎಟಿಎಂಗೆ ಬೆಂಕಿ ಬಿದ್ದು ಎರಡು ಅಂತಸ್ಥಿನ ಕಟ್ಟಡ ಸುಟ್ಟು ಕರಕಲದ ಘಟನೆ ನಡೆದಿದೆ.

ನಗರಾಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಎಚ್.ಎನ್.ಮೊಹಮ್ಮದ್ ಇಮಾಮ್ ನಿಯಾಝಿ ಅವರಿಗೆ ಸೇರಿದ ಪರ್ವಾಜ್ ಪ್ಲಾಜಾ ಎಂಬ ಕಟ್ಟಡದಲ್ಲಿರುವ ಎಸ್‌ಬಿಐ ಎಟಿಎಂಗೆ ಮುಂಜಾನೆ 6 ಗಂಟೆ ಸುಮಾರಿಗೆ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಬಿದ್ದಿದ್ದು, ಎಟಿಎಂ ಮೆಷೀನ್ ಸುಟ್ಟು ಕರಕಲಾಗಿದೆ.

ಅಲ್ಲದೆ ಅದೇ ಕಟ್ಟಡ ಮೇಲಿರುವ ಮೊಬೈಲ್ ಅಂಗಡಿ ಸೇರಿದಂತೆ ಅಕ್ಕ ಪಕ್ಕದಲ್ಲಿರುವ ಅಂಗಡಿ ಮತ್ತು ಕಟ್ಟಡಗಳಿಗೆ ಬೆಂಕಿ ಆವರಿಸಿಕೊಂಡಿದ್ದು, ಅಂಗಡಿ ಮತ್ತು ಕಟ್ಟಡ ದಲ್ಲಿರುವ ವಸ್ತುಗಳು ಸುಟ್ಟು ಹೋಗಿವೆ.

ಸದ್ಯ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News