ಹೊಸಪೇಟೆ | ಕಾಂಗ್ರೆಸ್ ಮಹಿಳಾ ಘಟಕದ ದಕ್ಷಿಣ ಕನ್ನಡ, ಮೈಸೂರು ಜಿಲ್ಲಾ ಉಸ್ತುವಾರಿಯಾಗಿ ಕವಿತಾ ಸಿಂಗ್ ನೇಮಕ
Update: 2025-09-13 22:43 IST
ಹೊಸಪೇಟೆ, ಸೆ.13: ಕಾಂಗ್ರೆಸ್ ಮಹಿಳಾ ರಾಜ್ಯಾಧ್ಯಕ್ಷೆ ಸೌಮ್ಯ ರೆಡ್ಡಿ ಆದೇಶದ ಮೇರೆಗೆ ವಿಜಯನಗರ ಜಿಲ್ಲೆಯ ಮಹಿಳಾ ಘಟಕದ ರಾಜ್ಯಕಾರ್ಯದರ್ಶಿಯಾಗಿ ಪಕ್ಷದಲ್ಲಿ ಕಾರ್ಯನಿರ್ವಹಿಸುತ್ತಿರುವ ಕವಿತಾ ಸಿಂಗ್ ಅವರನ್ನು ಮಹಿಳಾ ಘಟಕದ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಮೈಸೂರು ಜಿಲ್ಲೆಗಳಿಗೆ ಉಸ್ತುವಾರಿಯಾಗಿ ನೇಮಕ ಮಾಡಿ ಆದೇಶ ನೀಡಲಾಗಿದೆ ಎಂದು ವರದಿಯಾಗಿದೆ.