×
Ad

ಹೊಸಪೇಟೆ | ವಿದ್ಯಾರ್ಥಿನಿಯರಿಗೆ ಸಾವಿತ್ರಿಬಾಯಿ ಫುಲೆ ಮಾದರಿಯಾಗಿದ್ದಾರೆ : ಡಾ.ಅಮರೇಶ ಯತಗಲ್

Update: 2025-09-10 22:23 IST

ಹೊಸಪೇಟೆ : ಸಾವಿತ್ರಿಬಾಯಿ ಫುಲೆ ಅವರು ಪತಿ ಜ್ಯೋತಿಬಾ ಫುಲೆಯವರೊಂದಿಗೆ ಕೈಜೋಡಿಸಿ ತಾನೂ ಅಕ್ಷರ ಕಲಿತು ಶೋಷಿತರ, ಅಸಹಾಯಕರ, ಅಸ್ಪೃಶ್ಯ ಮಹಿಳೆಯರಿಗಾಗಿಯೇ ಶಿಕ್ಷಣ ಸಂಸ್ಥೆ ತೆರೆದು, ಅಂಥವರ ಎದೆಯಲ್ಲಿ ಶಿಕ್ಷಣದ ಮೂಲಕ ಅಂತಃಶಕ್ತಿ ತುಂಬಿದರುಎಂದು ಕನ್ನಡ ವಿಶ್ವವಿದ್ಯಾಲಯದ ಅಧ್ಯಯನಾಂಗದ ನಿರ್ದೇಶಕರಾದ ಡಾ.ಅಮರೇಶ ಯತಗಲ್ ತಿಳಿಸಿದರು.

ಕನ್ನಡ ವಿಶ್ವವಿದ್ಯಾಲಯದ ಸಂಗೀತ ಮತ್ತು ನೃತ್ಯ ವಿಭಾಗ, ನಾಟಕ ವಿಭಾಗದ ವತಿಯಿಂದ ಸೆ.9ರಂದು ಪಂಪ ಸಭಾಂಗಣದಲ್ಲಿ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆಯ ಸಮಾರಂಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿನಿಯರಿಗೆ ಮಹಾತಾಯಿ ಅಕ್ಷರದವ್ವ ಸಾವಿತ್ರಿಬಾಯಿ ಫುಲೆ ಅವರು ಮಾದರಿಯಾಗಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾನ್ಯ ಕುಲಪತಿಗಳಾದ ಡಾ. ಡಿ.ವಿ.ಪರಮಶಿವಮೂರ್ತಿ, ಸಂಗೀತ ಮತ್ತು ನೃತ್ಯ ವಿಭಾಗದ ಹಾಗೂ ನಾಟಕ ವಿಭಾಗದ ಮುಖ್ಯಸ್ಥರಾದ ಡಾ.ವೀರೇಶ ಬಡಿಗೇರ ಅವರು ಮಾತನಾಡಿದರು.

ಈ ವೇಳೆ ಎಂ.ಎ ಕನ್ನಡ ಸಾಹಿತ್ಯ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ ತಿಪ್ಪೇಸ್ವಾಮಿ ನಾಯ್ಕ ರಚಿಸಿ ಅಭಿನಯಿಸಿದ ಪೇಪರ್ ನಾಟಕ ಪ್ರದರ್ಶನಗೊಂಡಿತು.

ಡಾ.ವೀರೇಶ ಬಡಿಗೇರ ಅವರ ಮಾರ್ಗದರ್ಶನದಲ್ಲಿ ಎಂ.ಎ ಕನ್ನಡ ಸಾಹಿತ್ಯದ ವಿದ್ಯಾರ್ಥಿಗಳು ಸ್ವಯಂ ಪ್ರೇರಣೆಯಿಂದ ಅಭಿನಯಿಸಿ ಸಾವೇ ಬದುಕಿನ ಕೊನೆಯಲ್ಲ ಬದುಕು ಬಹಳ ದೊಡ್ಡದು ಎನ್ನುವ ಸಂದೇಶವನ್ನು ಅಭಿನಯದ ಮೂಲಕ ಮನವರಿಕೆ ಮಾಡಿದರು.

ಪಾತ್ರ ವರ್ಗದಲ್ಲಿ ಉದ್ಯೋಗಿ(ಬಡಿಗೇರ ಶಂಕರ), ಮಧ್ಯವಯಸ್ಕ(ದಯಾನಂದ ಪಾಟೀಲ), ವಯೋವೃದ್ಧ(ಹನುಮಂತ ಮಡಿವಾಳರ), ಚಿಕ್ಕ ಹುಡುಗಿ(ಸುನೀತಾ ಟಿ.ಎಂ), ಹುಡುಗಿಯ ತಾಯಿ( ಲಕ್ಷ್ಮಿ ಲಮಾಣಿ), ಸನ್ಯಾಸಿ(ತಿಪ್ಪೇಸ್ವಾಮಿ ನಾಯ್ಕ), ಒಬ್ಬ(ಶಿವಪುತ್ರಪ್ಪ ಕಾಯಕದ), ಮತ್ತೊಬ್ಬ(ಗುರುಬಸವ ಸಿ.ಎಂ) ಕನ್ನಡ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು ವಿದ್ಯಾರ್ಥಿಗಳು ಇಡೀ ಕಾರ್ಯಕ್ರಮದಲ್ಲಿ ಉಪಸ್ಥಿತಿಯಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News