ಹೊಸಪೇಟೆ | ಸಾರಿಗೆ ಮುಷ್ಕರದಿಂದ ಸಾರ್ವಜನಿಕರಿಗೆ ತೊಂದರೆಯಾಗದ ಹಾಗೆ ತಯಾರಿ ಮಾಡಿದ್ದೇವೆ : ತಿಮ್ಮಾರೆಡ್ಡಿ
ಹೊಸಪೇಟೆ : ಆ.5 ರಿಂದ ರಾಜ್ಯಾದ್ಯಂತ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ ಪರ್ಯಾಯವಾಗಿ ಖಾಸಗಿ ವಾಹನಗಳ ವ್ಯವಸ್ಥೆ ಮಾಡಿಕೊಂಡಿದ್ದೇವೆ ಎಂದು KSRTC ವಿಜಯನಗರ ವಿಭಾಗೀಯ ನಿಯಂತ್ರಣಾಧಿಕಾರಿ ತಿಮ್ಮಾರೆಡ್ಡಿ ತಿಳಿಸಿದರು.
ನಗರದ ಕೆಕೆಆರ್ಟಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಜಿಲ್ಲಾಡಳಿತ, ಡಿಸಿ, ಎಸ್ಪಿ, ಆರ್ ಟಿ ಓ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಿರ್ಧಾರಿಸಿದ್ದೇವೆ. ಖಾಸಗಿ ಶಾಲಾ, ಕಾಲೇಜು ಬಸ್, ಮಿನಿ ಟೆಂಪೋ ಮೂಲಕ ಸಾರಿಗೆ ವ್ಯವಸ್ಥೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಹಗರಿಬೊಮ್ಮನಹಳ್ಳಿ, ಹೊಸಪೇಟೆ, ಹರಪನಹಳ್ಳಿ, ಕೂಡ್ಲಿಗಿ ಹಡಗಲಿ ಸೇರಿದಂತೆ ಐದು ಬಸ್ ಘಟಕಗಳಿವೆ. ವಿಜಯನಗರ ಜಿಲ್ಲಾದ್ಯಾಂತ ಒಟ್ಟು 472 ಬಸ್ ನಿತ್ಯ ಕಾರ್ಯನಿರ್ವಹಿಸುತ್ತದೆ.
ಎಸ್ಮ ಜಾರಿ ಇದ್ದು, ಕರ್ತವ್ಯಕ್ಕೆ ಸಿಬ್ಬಂದಿಗಳು ಬರದಿದ್ದರೆ ಅವರ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆ. ವಿಜಯನಗರ ಜಿಲ್ಲೆಯಲ್ಲಿ ಒಟ್ಟು 1,720 ಸಾರಿಗೆ ನೌಕರರು, 122 ಹೊರಗುತ್ತಿಗೆ ನೌಕರರು ಕರ್ತವ್ಯಕ್ಕೆ ಬಾರದೆ ಮುಷ್ಕರದಲ್ಲಿ ಭಾಗಿಯಾದರೆ, ಅಂತವರ ವಿರುದ್ಧ ಕ್ರಮ ಜರುಗಿಸಲಾಗುವುದು.
ಸಾರ್ವಜನಿಕರಿಗೆ ತೊಂದರೆ ಆಗದಂತೆ ಮುಂಜಾಗ್ರತವಾಗಿ 98 ಖಾಸಗಿ ಬಸ್ ಗಳು, ಟೆಂಪೋ ಟ್ರ್ಯಾಕ್ಸ್ ಸೇರಿದಂತೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಖಾಸಗಿ ಬಸ್ ಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ನೀಡಲಾಗುವುದು ಅಂತ ಡಿಸಿ ತಿಮ್ಮಾರೆಡ್ಡಿ ತಿಳಿಸಿದ್ಧಾರೆ.