ವಿಜಯನಗರ ಜಿಲ್ಲೆಗೆ ಕೀರ್ತಿ ತಂದ ಕರಾಟೆ ಪಟುಗಳು
Update: 2025-08-04 22:12 IST
ಹೊಸಪೇಟೆ :ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ಫುನಕೋಷಿ ಶೋಟೋಕಾನ್ ಕರಾಟೆ ಅಸೋಸಿಯೇಷನ್ ಇವರ ನೇತೃತ್ವದಲ್ಲಿ ಶಿವಮೊಗ್ಗದ ನೆಹರು ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಕರಾಟೆ ಸ್ಪರ್ಧೆಯಲ್ಲಿ ವಿಜಯನಗರ ಜಿಲ್ಲೆಯ ಕ್ರೀಡಾಪಟುಗಳು ಪ್ರಥಮ ಸ್ಥಾನ ಪಡೆದಿದ್ದಾರೆ.
ಕರಾಟೆ ಸ್ಪರ್ಧೆಯಲ್ಲಿ ವಿಜಯನಗರ ಜಿಲ್ಲೆಯ ಹೊಸಪೇಟೆಯಿಂದ ಒಟ್ಟು 7 ಜನ ಕ್ರೀಡಾಪಟುಗಳು ಭಾಗವಹಿಸಿದ್ದು, ಸೋಹನ್ ಸಂದೀಪ್, ಎಂ.ಡಿ. ರಯ್ಯಾನ್, ಅಭಿಷೇಕ್, ಟಿ. ಅಶೋಕ್ ಹಾಗೂ ಡಿ. ಮೊಹಮ್ಮದ್ ಜುಬೈರ್ ಪ್ರಥಮ ಸ್ಥಾನ ಪಡೆದಿದ್ದಾರೆ ಹಾಗೂ ಧನುಷ್ ಕುಮಾರ್ ಹಾಗೂ ಎಂ.ಡಿ.ಅಬು ಸೂಫಿಯಾನ್ ದ್ವಿತೀಯ ಸ್ಥಾನ ಪಡೆಯುವ ಮೂಲಕ ವಿಜಯನಗರ ಜಿಲ್ಲೆಯ ಕೀರ್ತಿ ಪತಾಕೆಯನ್ನು ಹೆಚ್ಚಿಸಿದ್ದಾರೆ ಎಂದು ಕರಾಟೆ ಮಾಸ್ಟರ್ ಸೈಯದ್ ಸಲ್ಮಾನ್ ತಿಳಿಸಿದ್ದಾರೆ.