×
Ad

ಕಮಲಾಪುರದಲ್ಲಿ 26.17 ಕೋಟಿ ರೂ. ವೆಚ್ಚದ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಹೆಚ್.ಆರ್.ಗವಿಯಪ್ಪ ಚಾಲನೆ

Update: 2025-05-10 16:15 IST

ವಿಜಯನಗರ(ಹೊಸಪೇಟೆ) : ಕಮಲಾಪುರದ ವಾಲ್ಮೀಕಿ ವೃತ್ತದ ಬಳಿಯಿರುವ ನೀರು ಸರಬರಾಜು ಕೇಂದ್ರದ ಆವರಣದಲ್ಲಿ ಕೇಂದ್ರ ಸರ್ಕಾರದ ಅಮೃತ್ 2.0 ಯೋಜನೆಯಡಿ ಕಮಲಾಪುರ ಪಟ್ಟಣಕ್ಕೆ ಸುಧಾರಿತ ಕುಡಿಯುವ ನೀರು ಸರಬರಾಜು ಯೋಜನೆಯ ಕಾಮಗಾರಿಗೆ ಹೊಸಪೇಟೆ ಶಾಸಕ ಹೆಚ್.ಆರ್.ಗವಿಯಪ್ಪ ಅವರು ಶುಕ್ರವಾರ ಭೂಮಿಪೂಜೆ ನೆರವೇರಿಸಿದರು.

ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿ, ನಗರದಲ್ಲಿ ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕಾಗಿ ಅಮೃತ್ 2.0 ಯೋಜನೆಯಡಿ ಕುಡಿಯುವ ನೀರು ಸರಬರಾಜು ಘಟಕ ಆರಂಭವಾಗಲಿದೆ. ಪಟ್ಟಣದಲ್ಲಿ ಫೀಡರ್ ಮೇನ್ ಕೊಳವೆ ಮಾರ್ಗ, 10 ಲಕ್ಷ ಲೀಟರ್ ಸಾಮಾರ್ಥ್ಯದ ಮೇಲ್ಮಟ್ಟ ಜಲ ಸಂಗ್ರಹಗಾರ ನಿರ್ಮಾಣ, 6,199 ಕಿಲೋ ಮೀಟರ್ ವಿತರಣಾ ಜಾಲಾ ಹಾಗೂ ಪಟ್ಟಣದಲ್ಲಿ ಸುಮಾರು 6,000 ಮನೆಗಳಿಗೆ ನಳ ಸಂಪರ್ಕ ಕಲ್ಪಿಸಲಾಗುವುದು. ಹಾಲಿ 4.54 ಎಂಎಲ್‌ಡಿ ಸಾಮಾರ್ಥ್ಯದ ಜಲಶುದ್ಧಿಕರಣ ಘಟಕವನ್ನು ನವೀಕರಣಗೊಳಿಸಲಾಗುವುದು. ಒಟ್ಟಾರೆಯಾಗಿ 26.17 ಕೋಟಿ ರೂ. ಗಳ ವೆಚ್ಚದಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗಿದೆ. ವಿಶೇಷವಾಗಿ ಗುಣಮಟ್ಟದ ಕಾಮಗಾರಿಗೆ ನಿರ್ಮಿಸಲು ಗುತ್ತಿಗೆದಾರರಿಗೆ ಸೂಚಿಸಲಾಗಿದೆ ಎಂದರು.

ಇದೇ ವೇಳೆ ಕಮಲಾಪುರ ಪುರಸಭೆ ಕಚೇರಿಯಲ್ಲಿನ ನೂತನ 2 ಕಸದ ವಾಹನ, 1 ಜೆಸಿಬಿ ಯಂತ್ರವನ್ನು ಉದ್ಘಾಟಿಸಲಾಯಿತು.

ಭೂಮಿಪೂಜೆ ಕಾರ್ಯಕ್ರಮದಲ್ಲಿ ಪುರಸಭೆ ಉಪಾಧ್ಯಕ್ಷ ಗೋಪಾಲಕೃಷ್ಣ, ಸದಸ್ಯರಾದ ಮುಕ್ತಿಯಾರ್ ಭಾಷಾ, ನಾಮನಿರ್ದೇಶಿತ ಸದಸ್ಯರಾದ ಕನ್ನೇಶ್ವರ, ಸೋಮಶೇಖರ್, ಮುಖಂಡರಾದ ಖಾಜಾಹುಸೇನ್, ಮುಖ್ಯಾಧಿಕಾರಿ ಡಿ.ಬಿ.ಈರಣ್ಣ ಇತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News