ವಸತಿ ನಿವೇಶನ ಅರ್ಜಿ ಸಲ್ಲಿಕೆಗೆ ದುಪ್ಪಟ್ಟು ಹಣ ವಸೂಲಿ ಮಾಡಿದರೆ ಸೈಬರ್ ಸೆಂಟರ್ ವಿರುದ್ಧ ಕ್ರಮ: ಹೊಸಪೇಟೆ ನಗರ ಯೋಜನಾಧಿಕಾರಿ ಎಚ್ಚರಿಕೆ
ಹೊಸಪೇಟೆ: ವಸತಿ ನಿವೇಶನಗಳಿಗೆ ಅರ್ಜಿ ಸಲ್ಲಿಕೆಗೆ ಸೈಬರ್ ಸೆಂಟರ್ ಗಳಲ್ಲಿ ಸಾರ್ವಜನಿಕರಿಂದ ಬೇಕಾಬಿಟ್ಟಿ ಹಣ ವಸೂಲಿ ಮಾಡುತ್ತಿರುವ ದೂರಿನ ಹಿನ್ನೆಲೆಯಲ್ಲಿ ನಗರ ಯೋಜನಾಧಿಕಾರಿ ಮನೋಹರ್ ಇಂದು ಸೈಬರ್ ಸೆಂಟರ್ ಗಳಿಗೆ ದಿಢೀರ್ ಭೇಟಿ ಅವುಗಳ ಮಾಲಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹೊಸಪೇಟೆ ನಗರದ ತಹಶೀಲ್ದಾರ ಕಚೇರಿ ಅಕ್ಕಪಕ್ಕದ ಸೈಬರ್ ಸೆಂಟರ್ ಗಳಿಗೆ ಭೇಟಿ ನೀಡಿ ಪರಿಶೀಲಿಸಿದ ಮನೋಹರ್, ನಿವೇಶನಗಳ ಆನ್ ಲೈನ್ ಅರ್ಜಿ ಸಲ್ಲಿಕೆಗೆ 100 ರೂ. ಒಳಗೆ ದರ ನಿಗದಿ ಪಡಿಸಬೇಕು. ಹೆಚ್ಚಿನ ಹಣ ವಸೂಲಿ ಮಾಡಿದರೆ ಅಂತಹ ಸೈಬರ್ ಸೆಂಟರ್ ಗಳನ್ನು ಬಂದ್ ಮಾಡಿಸಲಾಗುವುದು ಎಚ್ಚರಿಕೆ ನೀಡಿದ್ದಾರೆ.
ಹೊಸಪೇಟೆ ನಗರಸಭೆಯು ನಿವೇಶನಕ್ಕಾಗಿ ವಸತಿರಹಿತರಿಂದ ಅರ್ಜಿ ಆಹ್ವಾನಿಸಿತ್ತು. ಈ ಹಿನ್ನೆಲೆಯಲ್ಲಿ ಸೈಬರ್ ಸೆಂಟರ್ ಗಳಿಗೆ ತೆರಳಿ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಸಾರ್ವಜನಿಕರು ನಿವೇಶನಕ್ಕೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಇದನ್ನ ಬಂಡವಾಳ ಮಾಡಿಕೊಂಡ ಸೈಬರ್ ಸೆಂಟರ್ ಗಳು ಅರ್ಜಿ ಸಲ್ಲಿಕೆಗೆ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವ ಆರೋಪ ಕೇಳಿಬಂದಿತ್ತು.
ಈ ಹಿನ್ನೆಲೆ ಏಕಾಏಕಿ ಇಂದು ಸೈಬರ್ ಸೆಂಟರ್ಗಳಿಗೆ ಖುದ್ದು ಯೋಜನಾಧಿಕಾರಿ ಮನೋಹರ್ ಭೇಟಿ ನೀಡಿ ಮಿತಿಗಿಂತ ಅಧಿಕ ಹಣ ವಸೂಲಿ ಮಾಡದಂತೆ ಅಂತಾ ತಾಕೀತು ಮಾಡಿದ್ದಾರೆ.